ದೊಡ್ಡಬಳ್ಳಾಪುರ: ರಾತ್ರಿ ಸಮಯದಲ್ಲಿ ಬೈಕ್ ಅಡ್ಡಗಟ್ಟಿ ಸವಾರರಿಂದ ಹಣ, ಮೊಬೈಲ್, ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೇ 18ರ ರಾತ್ರಿ ನಾರಾಯಣಸ್ವಾಮಿ ಎಂಬುವವರು ಅವರ ಸಂಬಂಧಿ ಬೈಕ್ನಲ್ಲಿ ಹೋಗುವ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಗೇಟ್ ಬಳಿ ಬೈಕ್ ಓವರ್‌ಟೇಕ್ ಮಾಡಿದ ದುಷ್ಕರ್ಮಿಗಳು, ಸವಾರರಿಂದ 20 ಸಾವಿರ ರೂ. ನಗದು, ಎರಡು ಮೊಬೈಲ್ ಹಾಗೂ ಬೈಕ್ ದೋಚಿ ಪರಾರಿಯಾಗಿದ್ದರು.