ಕರ್ನಾಟಕ

karnataka

ETV Bharat / state

ಬೆಂ.ಗ್ರಾಮಾಂತರ ಪ್ರದೇಶದಲ್ಲಿ ಮೂವರು ಸೋಂಕಿತರು ಸಾವು: ಒಂಬತ್ತು ಜನರಲ್ಲಿ ಸೋಂಕು ದೃಢ

ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಇಂದು ಮೂವರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಒಂಬತ್ತು ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತಿಳಿಸಿದ್ದಾರೆ.

ಕೊರೊನಾ
ಕೊರೊನಾ

By

Published : Jun 25, 2020, 11:25 PM IST

ಬೆಂಗಳೂರು: ಜಿಲ್ಲೆಯಲ್ಲಿ ಇಂದು ಕೋವಿಡ್-19 ಸೋಂಕಿಗೆ ಮೂರು ವ್ಯಕ್ತಿಗಳು ನಿಧನರಾಗಿದ್ದು, ಒಂಬತ್ತು ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತಿಳಿಸಿದ್ದಾರೆ.

ದೇವನಹಳ್ಳಿ ತಾಲೂಕಿನ ವಿಜಯಪುರದ 21 ವರ್ಷದ ಯುವತಿ (ಪಿ-10401) ಹಾಗೂ ನೆಲಮಂಗಲದ ತಾಲೂಕಿನ ಅರಿಶಿನಕುಂಟೆಯ ಪರಿಮಳ ನಗರದ ನಿವಾಸಿ 37 ವರ್ಷದ ಮಹಿಳೆಯು (ಪಿ-10409) ಇನ್‌ಫ್ಲೂಯೆನ್ಜಾ ಲೈಕ್ ಇಲ್ನೆಸ್ (ಐಎಲ್‌ಐ) ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ಆರೋಗ್ಯ ತಪಾಸಣೆ ಮಾಡಿಸಿದಾಗ ಕೊರೊನಾ ವೈರಾಣು ಸೋಂಕು ದೃಢಪಟ್ಟಿದೆ.

ಹೊಸಕೋಟೆ ನಗರದ 40 ವರ್ಷದ ಪುರುಷ (ಪಿ-10408), 26 ವರ್ಷದ ಯುವತಿ (ಪಿ-10406), 7 ವರ್ಷದ ಬಾಲಕ,(ಪಿ-10405), 32 ವರ್ಷದ ಪುರುಷ (ಪಿ-10407) ಇನ್‌ಫ್ಲೂಯೆನ್ಜಾ ಲೈಕ್ ಇಲ್ನೆಸ್ (ಐಎಲ್‌ಐ) ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ಆರೋಗ್ಯ ತಪಾಸಣೆ ಮಾಡಿಸಿದಾಗ ಸೋಂಕು ದೃಢಪಟ್ಟಿರುವುದು ಕಂಡುಬಂದಿದೆ. ಇನ್ನೊಂದು ಮೂಲದ ಪ್ರಕಾರ ಇವರು ಜೂನ್. 5 ರಂದು ಹೊಸಕೋಟೆಯಲ್ಲಿ 80 ವರ್ಷದ ಸೋಂಕಿತ ವೃದ್ಧೆ ಸಾವನ್ನಪ್ಪಿದರು ಅಧಿಕಾರಿಗಳಿಗೆ ಹೇಳದೆ 150ಕ್ಕೂ ಹೆಚ್ಚು ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು ಅವರಲ್ಲಿ ಈಗ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದು ಪ್ರಕರಣದಲ್ಲಿ ಹೊಸಕೋಟೆ ನಗರದ ಕೊರೊನಾ ಸೋಂಕಿತ ವ್ಯಕ್ತಿಯ (ಪಿ-10403) ದ್ವಿತೀಯ ಸಂಪರ್ಕ‌ ಹೊಂದಿದ್ದ ಹಿನ್ನೆಲೆ 47 ವರ್ಷದ ಪುರುಷ (ಪಿ-10399), 45 ವರ್ಷದ ಮಹಿಳೆ (ಪಿ-10400), 55 ವರ್ಷದ ಮಹಿಳೆ (ಪಿ-10404)ಯನ್ನ ತಪಾಸಣೆಗೆ ಒಳಪಡಿಸಿದಾಗ ಕೊರೊನಾ ವೈರಾಣು ಸೋಂಕು ದೃಢಪಟ್ಟಿದೆ.

ಸೋಂಕಿತ ವ್ಯಕ್ತಿಗಳು ಬೆಂಗಳೂರಿನ ವಿಕ್ಟೋರಿಯಾ ಹಾಗೂ ಸಿ.ವಿ. ರಾಮನ್‌ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹೊಸಕೋಟೆ ತಾಲೂಕಿನ 60 ವರ್ಷದ ವೃದ್ಧೆ(ಪಿ-10403), 80 ವರ್ಷದ ವೃದ್ಧೆ(ಪಿ-10402) ನೆಲಮಂಗಲ ತಾಲೂಕಿನ ಸುಭಾಷ್‌ ನಗರದ 38 ವರ್ಷದ ಪುರುಷ (ಪಿ-10410), ತೀವ್ರ ಉಸಿರಾಟದ ತೊಂದರೆಯಿಂದಾಗಿ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಮರಣ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details