ನೆಲಮಂಗಲ: ಲೋಕ ಕಲ್ಯಾಣಾರ್ಥವಾಗಿ ತಿರುಪತಿಯಿಂದ ಶ್ರೀ ಶ್ರೀನಿವಾಸ ಸ್ವಾಮಿಯ ಮೂರ್ತಿ ತಂದು ತಿರುಪತಿಗೆ ಹೋಗಲಾದವರಿಗೂ ತಿಮ್ಮಪ್ಪನ ದರ್ಶನ ಮಾಡಿಸಲಾಯಿತು.
ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಆರ್ಯ ವೈಶ್ಯ ಸಂಘ ಹಾಗೂ ತಿರುಪತಿ ತಿರುಮಲ ದೇವಸ್ಥಾನಗಳ ದಾಸ ಸಾಹಿತ್ಯ ಪ್ರಾಜೆಕ್ಟ್ ನಿಂದ ತಿರುಮಂಜನಾಭಿಷೇಕ ಹಾಗೂ ಪುಷ್ಪಯಾಗವನ್ನು ಆಯೋಜನೆ ಮಾಡಲಾಗಿತ್ತು .
ತಿರುಮಲ ಸ್ವಾಮಿಗೆ ತಿರುಮಂಜನಾಭಿಷೇಕ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಪಡೆಯಲಾರದ ಭಕ್ತರಿಗೆ ದಾಬಸ್‌ಪೇಟೆಯಲ್ಲಿಯೇ ತಿಮ್ಮಪ್ಪನ ದರ್ಶನ ಮಾಡಿಸುವ ವ್ಯವಸ್ಥೆ ಮಾಡಿದರು. ಇದೇ ಮೊದಲ ಬಾರಿಗೆ ದಾಬಸ್‌ಪೇಟೆಯಲ್ಲಿ ತಿಮ್ಮಪ್ಪ ಸ್ವಾಮಿಯ ಸಂಪೂರ್ಣ ವೈಭವಯುತ ದರ್ಶನ ಹಾಗೂ ಶ್ರೀನಿವಾಸ ಕಲ್ಯಾಣ ಆಯೋಜಿಸಿದ್ದು. ತಿಮ್ಮಪ್ಪನ ದರ್ಶನ ಪಡೆದ ಭಕ್ತರು ಸಂತಸ ವ್ಯಕ್ತಪಡಿಸಿದರು.
ಮೊದಲಿ ಬಾರಿಗೆ ತಿರುಪತಿಯಿಂದ ಸ್ವಾಮಿಯನ್ನು ಕರೆಸಲಾಗಿದ್ದು, ಆರ್ಯ ವೈಶ್ಯ ಭಕ್ತರ ನೆರವಿನಿಂದ ಇಂತಹ ಅದ್ದೂರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 1,500ಕ್ಕೂ ಅಧಿಕ ಭಕ್ತರು ಸೇರಿದ್ದು ವಿಶೇಷವಾಗಿತ್ತು. ಲೋಕ ಕಲ್ಯಾಣರ್ಥವಾಗಿ ಈ ತಿರುಮಂಜನಾಭಿಷೇಕ ಆಯೋಜಿಸಿದ್ದು, ಭಕ್ತರು ಸಹಕಾರ ನೀಡಿದರೆ ಪ್ರತಿವರ್ಷ ಇಂತಹ ಕಲ್ಯಾಣೋತ್ಸವ ಆಯೋಜಿಸಲಿದ್ದೇವೆ ಎಂದು ಸಂಘಟಕರು ಹೇಳಿದ್ದಾರೆ.