ನೆಲಮಂಗಲ: ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆಗೆ ಯತ್ನಿಸಿದ ಕಳ್ಳರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ನೆಲಮಂಗಲ ತಾಲೂಕಿನ ಆನಂದನಗರ ಗ್ರಾಮದಲ್ಲಿ ನಡೆದಿದೆ.
ನೆಲಮಂಗಲದಲ್ಲಿ ಮಾರಕಾಸ್ತ್ರದಿಂದ ಬೆದರಿಸಿದ ಕಳ್ಳರಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸಾ - bangalore rural news
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಆನಂದ ನಗರ ಗ್ರಾಮದಲ್ಲಿ ವೃದ್ಧರೊಬ್ಬರಿಗೆ ಮಾರಕಾಸ್ತ್ರ ತೋರಿಸಿ ಮೊಬೈಲ್ ದೋಚಿಕೊಂಡು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಗ್ರಾಮಸ್ಥರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಗ್ರಾಮಸ್ಥರಿಂದ ಥಳಿಸಿಕೊಂಡ ಆರೋಪಿಗಳು
ಇಲ್ಲಿನ ನಿವಾಸಿ ವೃದ್ಧರೊಬ್ಬರಿಗೆ ಮಾರಕಾಸ್ತ್ರಗಳಿಂದ ಬೆದರಿಸಿ ಅವರ ಬಳಿಯಿದ್ದ ಮೊಬೈಲ್ ಕಿತ್ತುಕೊಂಡು, ಆಟೋದಲ್ಲಿ ಪರಾರಿಯಾಗಿದ್ದಾರೆ. ವಿಷಯಗೊತ್ತಾದ ತಕ್ಷಣವೇ ಗ್ರಾಮಸ್ಥರು ಬೆನ್ನಟ್ಟಿ ಹಿಡಿದು ಮನಬಂದಂತೆ ಹೊಡೆದು ಪೊಲೀಸರೊಗೆ ವಿಷಯ ತಿಳಿಸಿದ್ದಾರೆ.
ಬೆಂಗಳೂರಿನ ಆಂಧ್ರಹಳ್ಳಿ ಮೂಲದ ತೌಶಿಕ್(19), ನಿಖಿಲ್(20), ಬಸವ(19) ಕಳ್ಳತನಕ್ಕೆ ಯತ್ನಿಸಿದ ಆರೋಪಿಗಳಾಗಿದ್ದಾರೆ. ಆರೋಪಿಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Last Updated : Oct 8, 2019, 12:16 PM IST