ಕರ್ನಾಟಕ

karnataka

ETV Bharat / state

ಲಾಕ್​​​​​​ಡೌನ್ ಬಳಸಿಕೊಂಡ ಖದೀಮರು: ಮನೆಗೆ ನುಗ್ಗಿ ಐದು ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ - doddaballapur theft news

ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ, ಮನೆಗೆ ಬರಲು ಸಾಧ್ಯವಾಗದೆ ತಂಗಿಯ ಮನೆಯಲ್ಲಿಯೇ  ಉಳಿಯಬೇಕಾಗಿತ್ತು, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಮಧ್ಯರಾತ್ರಿ ಮನೆಗೆ ನುಗ್ಗಿ ಬೀರುವಿನಲ್ಲಿದ್ದ 50 ಸಾವಿರ ನಗದು , 5 ಲಕ್ಷ  ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

Doddaballapur
ದೊಡ್ಡಬಳ್ಳಾಪುರ

By

Published : Apr 3, 2020, 5:24 PM IST

ದೊಡ್ಡಬಳ್ಳಾಪುರ: ದೇಶದ್ಯಾಂತ ಜಾರಿಯಲ್ಲಿರುವ ಲಾಕ್​​​​ಡೌನ್ ಅವಕಾಶ ಬಳಸಿಕೊಂಡ ಖದೀಮರು ಮನೆಗೆ ನುಗ್ಗಿ 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ದೊಡ್ಡಬಳ್ಳಾಪುರ ನಗರದ ಗಂಗಾಧರಪುರ ನಿವಾಸಿ ಬಷಿರ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು. ಬಷಿರ್ ಕುಟುಂಬ ಗೌರಿಬಿದನೂರ ತಾಲೂಕಿನ ಕೊಟಲದಿನ್ನೆಯಲ್ಲಿದ್ದ ತಂಗಿಯ ಮನೆಗೆ ಹೋಗಿದ್ದ ಸಮಯದಲ್ಲಿ ಕಳ್ಳತನ ಮಾಡಿದ್ದಾರೆ.

ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ, ಮನೆಗೆ ಬರಲು ಸಾಧ್ಯವಾಗದೇ ತಂಗಿಯ ಮನೆಯಲ್ಲಿಯೇ ಉಳಿಯಬೇಕಾಗಿತ್ತು, ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು ಮಧ್ಯರಾತ್ರಿ ಮನೆಗೆ ನುಗ್ಗಿ ಬೀರುವಿನಲ್ಲಿದ್ದ 50 ಸಾವಿರ ನಗದು , 5 ಲಕ್ಷ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ನಂತರ ಮನೆಗೆ ಬಂದ ಬಷಿರ್ ಕುಟುಂಬ, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ABOUT THE AUTHOR

...view details