ದೊಡ್ಡಬಳ್ಳಾಪುರ: ನಗರದ ಹೇಮಾವತಿ ಪೇಟೆಯಲ್ಲಿ ಬೈಕ್ ಕಳ್ಳನೊಬ್ಬ ತನ್ನ ಕೈಚಳಕ ತೋರಿಸಿದ್ದಾನೆ. ಅಂಗಡಿ ಮುಂಗಟ್ಟುಗಳಿಂದ ಕೂಡಿದ ಪ್ರದೇಶದಲ್ಲೇ ಸೈಲೆಂಟ್ ಆಗಿ ಬೈಕ್ ಕದ್ದು ಪರಾರಿಯಾಗಿದ್ದಾನೆ.
ದೊಡ್ಡಬಳ್ಳಾಪುರದಲ್ಲಿ ಖತರ್ನಾಕ್ ಕಳ್ಳನ ಕೈಚಳಕ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - bike theft
ಟಿಫ್ ಟಾಪ್ ಆಗಿ ಬಂದು ಕಳ್ಳನೋರ್ವ ಬೈಕ್ ಕದ್ದು ಪರಾರಿಯಾಗಿದ್ದಾನೆ. ಚೋರನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದೊಡ್ಡಬಳ್ಳಾಪುರ
ವಾಣಿಜ್ಯ ಸಂಕೀರ್ಣಗಳಲ್ಲಿರುವ ಜನನಿಬಿಡ ಪ್ರದೇಶದಲ್ಲಿ ಬೆಳಗ್ಗೆ 8 ಗಂಟೆಯ ಸಮಯದಲ್ಲಿ ಫುಲ್ ಟಿಪ್ ಟಾಪ್ ಆಗಿ ಬಂದ ಕಳ್ಳ ಗಾಯಿತ್ರಿ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಅನ್ನು ನಕಲಿ ಕೀ ಬಳಸಿ ಸುಲಭವಾಗಿ ಸ್ಟಾರ್ಟ್ ಮಾಡಿಕೊಂಡು ಪರಾರಿಯಾಗಿದ್ದಾನೆ.
ಬೈಕ್ ಕಳ್ಳತನದ ವಿಡಿಯೋ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.