ನೆಲಮಂಗಲ: ಯೂಟ್ಯೂಬ್(YouTube) ವಿಡಿಯೋ ವೀಕ್ಷಿಸಿ ಪ್ರೇರಣೆಗೊಂಡ ಕಳ್ಳನೋರ್ವ ಗ್ಯಾಸ್ ಕಟ್ಟರ್ ಬಳಸಿ ಅಂಗಡಿಗೆ ಕನ್ನಹಾಕಿದ್ದ. ಸದ್ಯ ಅ ಖದೀಮನನ್ನು ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
YouTube ವಿಡಿಯೋ ನೋಡಿ ಗ್ಯಾಸ್ ಕಟ್ಟರ್ನಿಂದ ಅಂಗಡಿಗೆ ಕನ್ನ: ಆರೋಪಿ ಅಂದರ್ - ಮಾದನಾಯಕನಹಳ್ಳಿ ಪೊಲೀಸ್ ಠಾಣೆ
YouTube ವಿಡಿಯೋ ನೋಡಿ ಗ್ಯಾಸ್ ಕಟ್ಟರ್ ಬಳಸಿ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದ ಚಕ್ಕೆರೆ ಮೂಲದ ವಿನೋದ್ ಕುಮಾರ್ @ ವಿನು 24 ವರ್ಷ ಬಂಧಿತ ಆರೋಪಿಯಾಗಿದ್ದು, ಸಿನಿಮಾಗಳಲ್ಲಿ ತೋರಿಸುವಂತೆ ಕಳ್ಳತನ ಮಾಡಲು ಶುರು ಮಾಡಿದ್ದ. ಈತ ಕಳೆದೊಂದು ತಿಂಗಳ ಹಿಂದೆ ಗ್ಯಾಸ್ ಕಟ್ಟರ್ ಬಳಸಿ ಬೆಂಗಳೂರು ಉತ್ತರ ತಾಲೂಕಿನ ತೋಟಗೆರೆಯ ಸುರೇಶ್ ಎಂಬುವರ ಪ್ರಾವಿಷನ್ ಸ್ಟೋರ್ ಬಾಗಿಲನ್ನು ಕತ್ತರಿಸಿ 21 ಸಾವಿರ ನಗದು ಕದ್ದು ತಲೆಮರೆಸಿಕೊಂಡಿದ್ದ ಎನ್ನಲಾಗ್ತಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲೀಸರು ಖಚಿತ ಮಾಹಿತಿ ಆಧರಿಸಿ ಕೃತ್ಯಕ್ಕೆ ಬಳಸಿದ ಗ್ಯಾಸ್ ಕಟ್ಟರ್ ಮತ್ತು ಸಲಕರಣೆಗಳ ಸಹಿತ ಆರೋಪಿಯನ್ನ ಬಂಧಿಸಿದ್ದಾರೆ. ಈತನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.