ಕರ್ನಾಟಕ

karnataka

ETV Bharat / state

ಮತದಾನ ಮಾಡಲು ಊರಿಗೆ ಹೋಗಿದ್ದ ವೇಳೆ ಕಳ್ಳತನ - ಲೋಕಸಭಾ ಚುನಾವಣೆ

ಮನೆಯ ಬೀರುವಿನಲ್ಲಿದ್ದ ಕಬ್ಬಿಣದ ಪೆಟ್ಟಿಗೆಯ ಕೀ ಹೊಡೆದು ಪೆಟ್ಟಿಗೆಯಲ್ಲಿದ್ದ ಒಂದು ಚಿನ್ನದ ಅವಲಕ್ಕಿ ಸರ, ನಾಲ್ಕು ಜೊತೆ ಚಿನ್ನದ ಓಲೆ, ಚಿನ್ನದ ಬ್ರಾಸ್ ಲೇಟ್, ಚಿನ್ನದ ಕಡಗ ಸೇರಿದಂತೆ ಒಟ್ಟು 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು 25 ಸಾವಿರ ನಗದು ಹಣ ದೋಚಿ ಪರಾರಿಯಾಗಿದ್ದಾರೆ.

ಕಳ್ಳತನ

By

Published : Apr 21, 2019, 12:36 PM IST

ದೊಡ್ಡಬಳ್ಳಾಪುರ: ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನ ಮಾಡಲೆಂದು ಕುಟುಂಬದ ಸದಸ್ಯರೆಲ್ಲರು ಊರಿಗೆ ಹೋದ ವೇಳೆ ಮನೆಯ ಡೋರ್ ಲಾಕ್ ಮೀಟಿ ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಬಾಲಾಜಿ ಲೇಔಟ್​ನಲ್ಲಿ ಕಳವು ಪ್ರಕರಣ ನಡೆದಿದೆ. ಅಶ್ವತ್ಥನಾರಾಯಣ್ ಮನೆಯಲ್ಲಿ ಕಳ್ಳತನ ನಡೆದಿದ್ದು, ಕುಟುಂಬದ ಸದಸ್ಯರೆಲ್ಲ ಮನೆಗೆ ಬೀಗ ಹಾಕಿ ಓಟ್ ಮಾಡಲು ಹೋಗಿದ್ದ ವೇಳೆ, ಯಾರು ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆಯ ಡೋರ್ ಲಾಕ್ ಮೀಟಿ ಮನೆಗೆ ನುಗ್ಗಿದ್ದಾರೆ.

ಮನೆಯ ಬೀರುವಿನಲ್ಲಿದ್ದ ಕಬ್ಬಿಣದ ಪೆಟ್ಟಿಗೆಯ ಕೀ ಒಡೆದು ಪೆಟ್ಟಿಗೆಯಲ್ಲಿದ್ದ ಒಂದು ಚಿನ್ನದ ಅವಲಕ್ಕಿ ಸರ, ನಾಲ್ಕು ಜೊತೆ ಚಿನ್ನದ ಓಲೆ, ಚಿನ್ನದ ಬ್ರಾಸ್ ಲೇಟ್, ಚಿನ್ನದ ಕಡಗ ಸೇರಿದಂತೆ ಒಟ್ಟು 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು 25 ಸಾವಿರ ನಗದು ಹಣ ದೋಚಿ ಪರಾರಿಯಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details