ದೊಡ್ಡಬಳ್ಳಾಪುರ: ಲಾಕ್‌ಡೌನ್ ಸಮಯದಲ್ಲಿ ಬಾರ್ ಮತ್ತು ವೈನ್ ಶಾಪ್‌ಗಳ ಷಟರ್ ಒಡೆದು ಮದ್ಯ ಕಳ್ಳತನ ಮಾಡುತ್ತಿದ್ದ ಖದೀಮರನ್ನ ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಸಿದ್ದೇನಾಯಕನಹಳ್ಳಿ ಬಳಿಯ ಗೌರಿವೈನ್ಸ್ ಷಟರ್ ಮುರಿದು ಮದ್ಯದ ಬಾಟಲಿಗಳು ಮತ್ತು ಹಣ ಕಳ್ಳತನವಾಗಿತ್ತು. ನಂತರ ತಾಲೂಕಿನಾದ್ಯಂತ ಮದ್ಯ ಕಳ್ಳತನ ಪ್ರಕರಣ ದಾಖಲಾಗಿದ್ದವು.
ನಂದಿಕ್ರಾಸ್ ಬಳಿಯ ಮನುವೈನ್ಸ್, ತೂಬಗೆರೆಯ ಹರ್ಷ ಬಾರ್ ಅಂಡ್ ರೆಸ್ಟೋರೆಂಟ್, ಕೊನಘಟ್ಟ ಗ್ರಾಮದ ಎಮ್‌ಎಸ್‌ಐಎಲ್, ತಿಪ್ಪೂರು ಗ್ರಾಮದ ಹಂಸವೈನ್ಸ್ ಷಟರ್ ಬಾಗಿಲು ಮುರಿದು ಮದ್ಯ ಮತ್ತು ಹಣ ಕಳ್ಳತನ ಮಾಡಲಾಗಿತ್ತು.
ಬಾರ್ ಮತ್ತು ವೈನ್ ಶಾಪ್‌ಗಳಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮರ ಬಂಧನ.. ಬಾರ್ ಮತ್ತು ವೈನ್ ಶಾಪ್‌ಗಳ ಕಳ್ಳತನ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ರವಿ ಡಿ ಚನ್ನಣ್ಣನವರ್ ಕಳ್ಳರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದರು. ದೊಡ್ಡಬಳ್ಳಾಪುರ ಪೊಲೀಸ್ ತಂಡ ಮದ್ಯ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನಾಗರಾಜ್, ಅಂಜಿ, ನವೀನ್ ಕುಮಾರ್, ಶಶಿಕುಮಾರ್ ಎಂಬುವರನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ದೇವನಹಳ್ಳಿ ತಾಲೂಕಿನ ಬ್ಯಾಡರಹಳ್ಳಿ ಗೇಟ್ ಬಳಿಯ ಎಸ್ ಕೆ ವೈನ್ಸ್, ಶಿಡ್ಲಘಟ್ಟ ತಾಲೂಕಿನ ಹುಣಸೇನಹಳ್ಳಿಯ ಸಪ್ತಗಿರಿ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲೂ ಮದ್ಯ ಮತ್ತು ಹಣ ಕಳ್ಳತನ ಮಾಡಿರುವ ಬಗ್ಗೆ ಬಾಯಿಬಿಟ್ಟಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಕುಡಿಯಲು ಮದ್ಯ ಸಿಗದೆ, ಮದ್ಯ ಕಳ್ಳತನಕ್ಕೆ ಇಳಿದಿದ್ದರು. ಬಂಧಿತ ಆರೋಪಿಗಳಿಂದ 13 ಬಾಕ್ಸ್ ಮದ್ಯದ ಬಾಟಲಿಗಳನ್ನ ವಶಕ್ಕೆ ಪಡೆಯಲಾಗಿದೆ.
ಓದಿ : ಉಪಸಭಾಪತಿ ಎಸ್ ಎಲ್ ಧರ್ಮೇಗೌಡರು ರಾಜಕೀಯದಲ್ಲಿ ನಡೆದು ಬಂದ ದಾರಿ..