ಕರ್ನಾಟಕ

karnataka

ETV Bharat / state

ದೇವಾಲಯಕ್ಕೆ ನುಗ್ಗಿ ಹುಂಡಿಗಳನ್ನು ದೋಚಿ ಪರಾರಿಯಾದ ಖದೀಮರು..! ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಆನೇಕಲ್​ ತಾಲೂಕು ತಮಿಳುನಾಡಿಗೆ ಹತ್ತಿರ ಇರುವುದರಿಂದ ಇಲ್ಲಿ ಕಳ್ಳರ ಕಾಟ ಹೆಚ್ಚು. ಮೇಲಿಂದ ಮೇಲೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದು ಇತ್ತೀಚೆಗೆ ತಾಲೂಕಿನ ದೇವಸ್ಥಾನಕ್ಕೆ ನುಗ್ಗಿದ ಖದೀಮರಿಬ್ಬರು ಹುಂಡಿಗಳನ್ನು ಎಗರಿಸುವ ಮೂಲಕ ಮತ್ತೆ ತಮ್ಮ ಖಯಾಲಿ ಮುಂದುವರೆಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

By

Published : Mar 30, 2019, 1:25 PM IST

ಆನೇಕಲ್​:ಜೀರ್ಣೋದ್ಧಾರಗೊಂಡಿದ್ದ ದೇವಾಲಯಕ್ಕೆ ನುಗ್ಗಿದ ಕಳ್ಳರಿಬ್ಬರು ದೇವರ ಮುಂದೆ ಇಟ್ಟಿದ್ದ ಎರಡು ಹುಂಡಿಗಳನ್ನು ದೋಚಿ ಪರಾರಿಯಾದ ಘಟನೆ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಸರ್ಜಾಪುರ - ಅತ್ತಿಬೆಲೆ ರಸ್ತೆಯ ಪಕ್ಕದಲ್ಲಿರುವ ದೇವಾಲಯಕ್ಕೆ ನುಗ್ಗಿ ಹುಂಡಿಗಳನ್ನು ದೋಚಿ ಪರಾರಿಯಾಗುತ್ತಿರುವ ದೃಶ್ಯ ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುದ್ದಿ ತಿಳಿದು ಅತ್ತಿಬೆಲೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ABOUT THE AUTHOR

...view details