ಕರ್ನಾಟಕ

karnataka

ETV Bharat / state

ಮಧ್ಯರಾತ್ರಿ ಸಿನಿಮಾ ಪ್ರದರ್ಶನ.. ಕಳ್ಳತನಕ್ಕೆ ಆಹ್ವಾನ: ಸಾರ್ವಜನಿಕರ ಆಕ್ರೋಶ

ಮಧ್ಯರಾತ್ರಿ ಸಿನಿಮಾ ಪ್ರದರ್ಶನದಿಂದ ಥಿಯೇಟರ್ ಸುತ್ತಮುತ್ತ ಈಗಾಗಲೇ ಹಲವು ಕಳ್ಳತನ ಪ್ರಕರಣಗಳು ನಡೆದಿವೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

Vaibhav Theatre
ವೈಭವ್ ಥಿಯೇಟರ್

By

Published : Oct 12, 2022, 10:53 AM IST

Updated : Oct 12, 2022, 1:06 PM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ನಗರದ ಥಿಯೇಟರ್​ವೊಂದರಲ್ಲಿ 'ಕಾಂತಾರ' ಸಿನಿಮಾ ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ. ಮಧ್ಯರಾತ್ರಿ ಪ್ರದರ್ಶನದಿಂದ ಥಿಯೇಟರ್ ಸುತ್ತಮುತ್ತ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ದೊಡ್ಡಬಳ್ಳಾಪುರ ನಗರದಲ್ಲಿ ಕನ್ನಡ ಸಿನಿಮಾಗಳು ಯಶಸ್ವಿ ಪ್ರದರ್ಶನವಾಗುತ್ತವೆ. ಹಾಗೆಯೇ ಥಿಯೇಟರ್​​ನಲ್ಲಿ ಕಾಂತಾರ ಸಿನಿಮಾ ಸಹ ಯಶಸ್ವಿ ಪ್ರದರ್ಶನವಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಥಿಯೇಟರ್ ಮಾಲೀಕ ರಾತ್ರಿ 10:30 ನಂತರ ಹೆಚ್ಚುವರಿ ಪ್ರದರ್ಶನ ಪ್ರಾರಂಭಿಸಿದ್ದಾರೆ. ಶೋ ಮುಗಿಯೋದು ಮಧ್ಯರಾತ್ರಿ 1 ಗಂಟೆಗೆ. ಮಧ್ಯರಾತ್ರಿ ಸಮಯದಲ್ಲಿ ಸಾರ್ವಜನಿಕರು ಹೊರಗಡೆ ಬರುವುದರಿಂದ ಅಪರಾಧ ಕೃತ್ಯಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಥಿಯೇಟರ್ ಸುತ್ತಮುತ್ತ ಈಗಾಗಲೇ ಹಲವು ಕಳ್ಳತನ ಪ್ರಕರಣ ನಡೆದಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಮಧ್ಯರಾತ್ರಿ ಸಿನಿಮಾ ಪ್ರದರ್ಶನ.. ಕಳ್ಳತನಕ್ಕೆ ಆಹ್ವಾನ: ಸಾರ್ವಜನಿಕರ ಆಕ್ರೋಶ

ರಾತ್ರಿ 11 ಗಂಟೆಯ ನಂತರ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ನಗರದಲ್ಲಿ ಅವಕಾಶ ಇಲ್ಲ. ಆದರೆ ನಗರದ ಈ ಥಿಯೇಟರ್​ನಲ್ಲಿ ಮಧ್ಯರಾತ್ರಿ ಪ್ರದರ್ಶನಕ್ಕೆ ಅವಕಾಶ ಕೊಟ್ಟವರು ಯಾರು?, ತಳ್ಳು ಗಾಡಿಗಳಲ್ಲಿ ಹೋಟೆಲ್ ನಡೆಸುವರ ಮೇಲೆ ಕ್ರಮ ತೆಗೆದುಕೊಳ್ಳುವ ಪೊಲೀಸರು ಥಿಯೇಟರ್ ಮಾಲೀಕರ ಮೇಲೆ ಏಕೆ ಮೃದು ಥೋರಣೆ ತೋರುತ್ತಿದ್ದಾರೆ. ಮಧ್ಯರಾತ್ರಿ ಥಿಯೇಟರ್​​ನಿಂದ ಬರುವ ಜನರಿಗೆ ರಕ್ಷಣೆ ಇದೆಯಾ?. ಥಿಯೇಟರ್ ಹೊರಗೆ ಪಾರ್ಕಿಂಗ್ ಮಾಡುವ ವಾಹನಗಳು ಕಳ್ಳತನವಾದರೆ ಯಾರು ಇದಕ್ಕೆ ಹೊಣೆ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಥಿಯೇಟರ್ ಮಾಲೀಕರಿಗೆ ಲಾಭ ಮಾಡುವುದೇ ಉದ್ದೇಶ. ಪೇಕ್ಷಕರನ ರಕ್ಷಣೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ನೂರು ದಿನ ಪ್ರದರ್ಶನವಾಗುವ ಸಿನಿಮಾವನ್ನು ಎರಡೇ ವಾರದಲ್ಲಿ ಹೆಚ್ಚುವರಿ ಪ್ರದರ್ಶನ ಮಾಡಿ ಲಾಭ ಪಡೆಯುವ ದುರುದ್ದೇಶ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂಬುದು ಜನರ ಆರೋಪ.

ಇದನ್ನೂ ಓದಿ:ಕಾಂತಾರ ಸಿನಿಮಾ ಡಬ್ಬಿಂಗ್ ಬಗ್ಗೆ ಇನ್ನೆರಡು ದಿನಗಳಲ್ಲಿ ಘೋಷಣೆ: ನಟ ರಿಷಬ್ ಶೆಟ್ಟಿ

Last Updated : Oct 12, 2022, 1:06 PM IST

ABOUT THE AUTHOR

...view details