ದೊಡ್ಡಬಳ್ಳಾಪುರ: ನಗರದ ಹೃದಯ ಭಾಗದಲ್ಲಿರುವ ಕರಗ ದೇವಸ್ಥಾನದಲ್ಲಿ ರಾತ್ರಿ ಕಳ್ಳತನ ನಡೆದಿದ್ದು. ಕಳ್ಳರು ದೇವರ ಒಡವೆ ದೋಚಿ ಪರಾರಿಯಾಗಿದ್ದಾರೆ.
ದೊಡ್ಡಬಳ್ಳಾಪುರದ ಕರಗ ದೇವಸ್ಥಾನದಲ್ಲಿ ಕಳ್ಳತನ - undefined
ದೊಡ್ಡಬಳ್ಳಾಪುರದ ಕರಗ ದೇವಸ್ಥಾನದಲ್ಲಿ ಕಳ್ಳರು ಕಳ್ಳತನ ಮಾಡಿ. ದೇವರ ಒಡವೆಗಳನ್ನು ಕದ್ದೊಯ್ದಿದ್ದಾರೆ.
ಹುಂಡಿ ಒಡೆದು ಕಾಣಿಕೆ ಹಣ ದೋಚಿ ಪರಾರಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕರಗದ ದೇವಸ್ಥಾನದಲ್ಲಿ ಕಳವು ಪ್ರಕರಣ ನಡೆದಿದ್ದು. ನಿನ್ನೆ ರಾತ್ರಿ ಗೇಟಿನ ಬೀಗ ಒಡೆದು ದೇವಾಲಯದ ಒಳ ನುಗ್ಗಿದ ಕಳ್ಳರು ಎರಡು ತಾಳಿ, ದೇವರ ಕಿರೀಟ ದೋಚಿದ್ದಾರೆ. ಜೊತೆಗೆ ಹುಂಡಿ ಒಡೆದು ಕಾಣಿಕೆ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ವರ್ಷದಲ್ಲಿ ಎರಡನೇ ಬಾರಿಗೆ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಕಳವು ಮಾಡುವ ಮುನ್ನ ದೇವಸ್ಥಾನದ ಸುತ್ತ ಬೀದಿ ದೀಪ ಆರಿಸಿದ ಕಳ್ಳರು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕೃತ್ಯ ಎಸಗಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.