ಕರ್ನಾಟಕ

karnataka

ETV Bharat / state

ಬ್ಯಾಂಕ್‌ಗೆ ಹೋದ ಮಹಿಳೆ ನಾಪತ್ತೆ, ಸುಳಿವು ಸಿಕ್ಕಲ್ಲಿ ತ್ಯಾಮಗೊಂಡ್ಲು ಪೊಲೀಸರಿಗೆ ತಿಳಿಸಿ - ಹಣ ತರುವುದಾಗಿ ಹೇಳಿ ಹೋದ ಮಹಿಳೆ ನಾಪತ್ತೆ

ಬ್ಯಾಂಕ್​​ನಿಂದ ಹಣ ತರುವುದಾಗಿ ಹೇಳಿ ಹೋದ ಮಹಿಳೆ ದಿಢೀರ್​ ನಾಪತ್ತೆಯಾಗಿದ್ದಾಳೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಮಹಿಳೆಯ ಸುಳಿವಿಗಾಗಿ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ.

ನಾಪತ್ತೆಯಾದ ಮಹಿಳೆ

By

Published : Aug 23, 2019, 11:58 AM IST

ನೆಲಮಂಗಲ:ಬ್ಯಾಂಕ್​​ನಲ್ಲಿಟ್ಟಿದ್ದ ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಹೋದ ಮಹಿಳೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ತ್ಯಾಮಗೊಂಡ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸ್​ ಪ್ರಕಟಣೆ

ನೆಲಮಂಗಲ ತಾಲೂಕಿನ ವಾದಕುಂಟೆಯ ನಿವಾಸಿ ರಾಜಕುಮಾರವರ ಪತ್ನಿ ವೆಂಕಟಲಕ್ಷ್ಮಮ್ಮ(30) ನಾಪತ್ತೆಯಾಗಿರುವ ಮಹಿಳೆ. ದೊಡ್ಡಬೆಲೆಯ ಕೆನರಾ ಬ್ಯಾಂಕ್‌ನಿಂದ ಹಣ ತರುವುದಾಗಿ ಹೇಳಿ ಹೋಗಿದ್ದ ಈಕೆ ನಾಪತ್ತೆಯಾಗಿದ್ದಾಳೆ. ಸಂಬಂಧಿಕರು ಮತ್ತು ಸ್ನೇಹಿತರನ್ನು ವಿಚಾರಿಸಿದರೂ ಮಹಿಳೆಯ ಸುಳಿವು ಸಿಕ್ಕಿಲ್ಲ. ಇವರ ಪತಿ ರಾಜಕುಮಾರ್, ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ.

ನಾಪತ್ತೆಯಾದ ಮಹಿಳೆ ಬಿಎ ಪದವಿಧರೆಯಾಗಿದ್ದು. ಕನ್ನಡ ಮಾತನಾಡುತ್ತಾರೆ. ಎತ್ತರ 5.4 ಅಡಿ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಬಲಭಾಗದ ಕೆನ್ನೆಯಲ್ಲಿ ಬಿಳಿ ಮಚ್ಚೆ ಇದೆ. ಈಕೆಯ ಸುಳಿವು ಸಿಕ್ಕಲ್ಲಿ ತ್ಯಾಮಗೊಂಡ್ಲು ಪೊಲೀಸರನ್ನು ಸಂಪರ್ಕಿಸುವಂತೆ ಪೊಲೀಸ್​ ಪ್ರಕಟಣೆ ತಿಳಿಸಿದೆ.

ABOUT THE AUTHOR

...view details