ಆನೇಕಲ್: ಕ್ಯಾಂಪಸ್ ಟು ಕಮ್ಯುನಿಟಿ ಎಂಬ ತಂಡದ ಸದಸ್ಯರು ಸರ್ಕಾರಿ ಶಾಲೆಯ ಗೋಡೆಗಳ ಮೇಲೆ ಪೇಟಿಂಗ್ ಮಾಡುವ ಮೂಲಕ ಶಾಲೆಗೆ ಹೊಸ ರೂಪವನ್ನು ಕೊಟ್ಟು ಸರ್ಕಾರಿ ಶಾಲೆ ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಸರ್ಕಾರಿ ಶಾಲೆ ಗೋಡೆ ಮೇಲೆ ಅರಳಿದ ಸುಂದರ ಚಿತ್ರಗಳು! - ಸರ್ಕಾರಿ ಶಾಲೆಗಳ ಅಭಿವೃದ್ಧಿ
ಬೆಂಗಳೂರಿನ ಆನೇಕಲ್ ತಾಲೂಕಿನ ಸರ್ಜಾಪುರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕ್ಯಾಂಪಸ್ ಟು ಕಮ್ಯುನಿಟಿ ಎಂಬ ತಂಡದ ಸದಸ್ಯರು ಶಾಲೆಯ ಗೋಡೆ ಮತ್ತು ಕಾಂಪೌಂಡ್ ಮೇಲೆ ಕಲಾ ಚಿತ್ರಗಳನ್ನು ರಚಿಸಿದರು.
ಬೆಂಗಳೂರಿನ ಆನೇಕಲ್ ತಾಲೂಕಿನ ಸರ್ಜಾಪುರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುರಾನಾ ಕಾಲೇಜು, ಜೈನ್ ಕಾಲೇಜು, ದಯಾನಂದ ಕಾಲೇಜಿನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸರ್ಜಾಪುರದ ಸರ್ಕಾರಿ ಪ್ರೌಢ ಶಾಲೆಯ ಗೋಡೆ ಹಾಗೂ ಕಾಂಪೌಂಡ್ ಮೇಲೆ ನಾನಾ ಬಗೆಯ ಕಲಾ ಚಿತ್ರಗಳನ್ನು ರಚಿಸುವ ಮೂಲಕ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.
ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯ ಪ್ರಯುಕ್ತ ಬೆಂಗಳೂರು ನಗರ ಜಿಲ್ಲೆಯ 150ಕ್ಕೂ ಹೆಚ್ಚು ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಕ್ಯಾಂಪಸ್ ಟು ಕಮ್ಯುನಿಟಿ ಯುವಕರ ತಂಡ ಗುರಿ ಹೊಂದಿದೆ. ಸರ್ಜಾಪುರ ಭಾಗದಲ್ಲಿ ಎರಡು ದಿನಗಳಿಂದ ವಿದ್ಯಾರ್ಥಿಗಳು ಕಲಾ ಚಿತ್ರಗಳನ್ನು ಬಿಡಿಸುತ್ತಿದ್ದು, ಇದೇ ರೀತಿ ಇನ್ನು ಹಲವು ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆ ಮೂಡಿಸಿದರು.