ಬೆಂಗಳೂರು ಗ್ರಾಮಾಂತರ:ಮಹಿಳೆಯ ಕುತ್ತಿಗೆಯಲ್ಲಿನ ಚಿನ್ನದ ಸರವನ್ನು ಕಸಿಯಲು ಬಂದ ಕಳ್ಳನನ್ನು ಹಿಡಿಯಲು ಹೋಗಿ ಕಳ್ಳರಿಂದ ಇರಿತಕ್ಕೊಳಗಾಗಿದ್ದ ವ್ಯಕ್ತಿಗೆ ಗ್ರಾಮದ ನಾಗರಿಕರು ವೈಯುಕ್ತಿಕವಾಗಿ ಹಣ ಸಂಗ್ರಹಣೆ ಮಾಡಿ, ಚಿಕಿತ್ಸೆಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಕಮ್ಮವಾರಿ ಗ್ರಾಮದಲ್ಲಿ ನಡೆದಿದೆ.
ಸರಗಳ್ಳರಿಂದ ಇರಿತಕ್ಕೊಳಗಾದ ವ್ಯಕ್ತಿಯ ಚಿಕಿತ್ಸೆಗೆ ನೆರವು: ಮಾನವೀಯತೆ ಮೆರೆದ ಗ್ರಾಮಸ್ಥರು - ಬೆಂಗಳೂರು ಗ್ರಾಮಾಂತರ ಸುದ್ದಿ
ಮಹಿಳೆಯ ಕುತ್ತಿಗೆಯಲ್ಲಿನ ಚಿನ್ನದ ಸರವನ್ನು ಕಸಿಯಲು ಬಂದ ಕಳ್ಳನನ್ನು ಹಿಡಿಯಲು ಹೋಗಿ ಕಳ್ಳರಿಂದ ಇರಿತಕ್ಕೊಳಗಾಗಿದ್ದ ವ್ಯಕ್ತಿಗೆ ಗ್ರಾಮದ ನಾಗರಿಕರು ವೈಯುಕ್ತಿಕವಾಗಿ ಹಣ ಸಂಗ್ರಹಣೆ ಮಾಡಿ, ಚಿಕಿತ್ಸೆಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಕಮ್ಮವಾರಿ ಗ್ರಾಮದಲ್ಲಿ ನಡೆದಿದೆ.
ಹೊಸಕೋಟೆ ನಗರದ ಕಮ್ಮವಾರಿ ನಗರದಲ್ಲಿ ಇದೇ 22ರ ಭಾನುವಾರ ರಾತ್ರಿ 10 ಗಂಟೆಗೆ ಅಂಗಡಿಯಲ್ಲಿ ವ್ಯಾಪಾರ ಮಾಡುವ ಸೋಗಿನಲ್ಲಿ ಬಂದಿದ್ದ ಇಬ್ಬರು ಬೈಕ್ ಸವಾರರು, ಸಿಗರೇಟ್ ಖರೀದಿ ಮಾಡಿ ಅಂಗಡಿ ಮಾಲೀಕರಾದ ಗೌರಮ್ಮನ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕಸಿಯಲು ಯತ್ನಿಸಿದ್ದರು. ಈ ವೇಳೆ ಗೌರಮ್ಮ ಕಿರುಚಾಟ ಕೇಳಿ ಬಂದ ನೆರೆಮನೆಯ ಚಂದ್ರು ಎಂಬುವವರು ಕಳ್ಳರನ್ನು ಹಿಡಿದುಕೊಳ್ಳಲು ಯತ್ನಿಸಿದಾಗ ಕಳ್ಳರು ಡ್ರ್ಯಾಗನ್ನಿಂದ ಚಂದ್ರುವಿನ ಹೊಟ್ಟೆ, ಕೈ ಭಾಗಕ್ಕೆ ಬಲವಾಗಿ ತಿವಿದು ಪರಾರಿಯಾದ್ದರು. ಅಧಿಕ ರಕ್ತಸ್ರಾವವಾಗಿದ್ದ ಚಂದ್ರುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಹಲ್ಲೆಗೊಳಗಾದ ಚಂದ್ರು ಚಾಲಕ ವೃತ್ತಿ ಮಾಡುತ್ತಿರುವ ಪರಿಣಾಮ ಚಿಕಿತ್ಸೆಗೆ ವೆಚ್ಚ ಭರಿಸಲು ಕಷ್ಟವಾಗಿತ್ತು.
ಇದನ್ನರಿತ ಕಮ್ಮವಾರಿ ನಗರದ ನಾಗರಿಕರು, ಸುಮಾರು 85 ಸಾವಿರ ಸಂಗ್ರಹಣೆ ಮಾಡಿ ಚಿಕಿತ್ಸೆಗೆ ನೆರವು ನೀಡುವ ಮೂಲಕ ಮಾತವೀಯತೆ ಮೆರೆದಿದ್ದಾರೆ. ಅಲ್ಲದೇ, ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ಸರ್ಕಾರದಿಂದ ನೆರವು ನೀಡುವ ಕೆಲಸ ಮಾಡಬೇಕೆಂದು ಆಗ್ರಹಿಸಿದ್ದಾರೆ.