ದೇವನಹಳ್ಳಿ: ತಾಲೂಕಿನ ಕನ್ನಮಂಗಲ ಗ್ರಾಮ ಪಂಚಾಯತಿ ಅಕ್ರಮಗಳ ಬಗ್ಗೆ ತನಿಖೆ ನಡೆಯುತ್ತಿದ್ದು, ದುಷ್ಕರ್ಮಿಗಳು ಗ್ರಾ.ಪಂ ಕಾರ್ಯಾಲಯಕ್ಕೆ ಬೆಂಕಿ ಹಾಕಿ ದಾಖಲೆಗಳ ನಾಶಕ್ಕೆ ಯತ್ನಿಸಿದ್ದಾರೆ.
ಕನ್ನಮಂಗಲ ಗ್ರಾ.ಪಂಚಾಯಿತಿ ಕಾರ್ಯಾಲಯಕ್ಕೆ ದುಷ್ಕರ್ಮಿಗಳಿಂದ ಬೆಂಕಿ - ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು
ಗ್ರಾಮ ಪಂಚಾಯಿತಿ ಕಾಮಗಾರಿಯಲ್ಲಿ ಅಕ್ರಮಗಳು ನಡೆದ ಆರೋಪವಿದ್ದು, ಈ ಸಂಬಂಧ ತನಿಖೆ ನಡೆಯುತ್ತಿತ್ತು. ಇದರಿಂದ ಆತಂಕಗೊಂಡ ದುಷ್ಕರ್ಮಿಗಳು ಕಚೇರಿಯಲ್ಲಿನ ದಾಖಲೆಗಳನ್ನು ನಾಶಪಡಿಸಲು ಬೆಂಕಿ ಇಟ್ಟಿರುವ ಸಂಶಯ ವ್ಯಕ್ತವಾಗಿದೆ.
![ಕನ್ನಮಂಗಲ ಗ್ರಾ.ಪಂಚಾಯಿತಿ ಕಾರ್ಯಾಲಯಕ್ಕೆ ದುಷ್ಕರ್ಮಿಗಳಿಂದ ಬೆಂಕಿ The perpetrators who set fire to the Kannamangala village panchayat office](https://etvbharatimages.akamaized.net/etvbharat/prod-images/768-512-12220407-thumbnail-3x2-abch.jpg)
ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು
ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು
ತಡರಾತ್ರಿ ಕಚೇರಿಯ ಕಿಟಕಿ ಬಾಗಿಲು ಒಡೆದು ಮತ್ತು ಕಚೇರಿಯ ಮತ್ತೊಂದು ಕೀ ಬಳಸಿ ಒಳನುಗ್ಗಿರುವ ದುಷ್ಕರ್ಮಿಗಳು ಬೆಂಕಿ ಹಚ್ಚಿ ದಾಖಲೆಗಳ ನಾಶಗೊಳಿಸುಲ ಪ್ರಯತ್ನ ಮಾಡಿದ್ದಾರೆ. ಗ್ರಾಮ ಪಂಚಾಯಿತಿಯ ಕಾಮಗಾರಿಯಲ್ಲಿ ಅಕ್ರಮಗಳು ನಡೆದ ಆರೋಪವಿದ್ದು, ಈ ವಿಚಾರಕ್ಕೆ ತನಿಖೆ ನಡೆಯುತ್ತಿತ್ತು. ಇದರಿಂದ ಆತಂಕಗೊಂಡ ದುಷ್ಕರ್ಮಿಗಳು ಕಚೇರಿಯಲ್ಲಿನ ದಾಖಲೆಗಳ ನಾಶಕ್ಕೆ ಬೆಂಕಿ ಇಟ್ಟಿರುವ ಸಂಶಯ ವ್ಯಕ್ತವಾಗಿದೆ. ಸ್ಥಳಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.