ಕರ್ನಾಟಕ

karnataka

ETV Bharat / state

ಬಾರ್​ನಲ್ಲಿ ಲಾಂಗ್‌ ಝಳಪಿಸಿದ ಕುಡುಕ : 'ಕಿಕ್‌' ಕೊಟ್ಟ ಮೇಲೆ ಆಸ್ಪತ್ರೆಗೆ ದಾಖಲಾದ ಎಣ್ಣೆ ಗಿರಾಕಿ! - undefined

ಬಾರ್​ನಲ್ಲಿ ಕುಡುಕನೋರ್ವ ಕ್ಯಾಷಿಯರ್​ ಮೇಲೆ ಹಲ್ಲೆಗೆ ಯತ್ನಿಸಿ, ಧರ್ಮದೇಟು ತಿಂದಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಾರ್​ನಲ್ಲಿ ಲಾಂಗ್ ಝಳಪಿಸಿದ ಕುಡುಕ

By

Published : May 10, 2019, 11:51 AM IST

ನೆಲಮಂಗಲ: ಕ್ಷುಲ್ಲಕ ಕಾರಣಕ್ಕೆ ಕುಡುಕನೊಬ್ಬ ಲಾಂಗ್ ಹಿಡಿದು ಕ್ಯಾಷಿಯರ್​ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನೆಲಮಂಗಲದಲ್ಲಿ ಬಾರ್​ವೊಂದರಲ್ಲಿ ನಡೆದಿದೆ.

ಬಾರ್​ನಲ್ಲಿ ಲಾಂಗ್ ಝಳಪಿಸಿದ ಕುಡುಕನಿಗೆ ಧರ್ಮದೇಟು

ನೆಲಮಂಗಲ ಪಟ್ಟಣದ ಶ್ರೀನಿಧಿ ಬಾರ್​ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ಕುಡಿದ ನಷೆಯಲ್ಲಿ ವಾಜರಹಳ್ಳಿ ನಿವಾಸಿ ಅನಿಲ್ ಕುಮಾರ್ ಎಂಬಾತ ಕೈಯಲ್ಲಿ ಲಾಂಗ್​ ಹಿಡಿದು ಏಕಾಏಕಿ ಕ್ಯಾಷಿಯರ್ ಸುಖೇಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

ಈ ವೇಳೆ ಅಲ್ಲೇ ಇದ್ದ ಜನರು ಅನಿಲ್​ ಕುಮಾರ್​ನನ್ನ ಹಿಡಿದು ಥಳಿಸಿದ್ದಾರೆ. ಸದ್ಯ ಜನರಿಂದ ಧರ್ಮದೇಟು ತಿಂದ ಅನಿಲ್​ನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನೆಲಮಂಗಲ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details