ಕರ್ನಾಟಕ

karnataka

ETV Bharat / state

ಅತೃಪ್ತರ ನಿರ್ಧಾರ ನಿಮ್ಮ ಹಾಗೂ ರಾಜ್ಯದ ಭವಿಷ್ಯಕ್ಕೆ ಮಾರಕ: ಹೆಚ್​​ಡಿಕೆ ಕಿಡಿ - ಅತೃಪ್ತ, ಶಾಸಕರು, ತೆಗೆದುಕೊಳ್ಳುತ್ತಿರುವ, ನಿರ್ಧಾರ ,ನಿಮ್ಮ ,ಭವಿಷ್ಯ, ರಾಜ್ಯದ, ಭವಿಷ್ಯಕ್ಕೆ, ಮಾರಕವಾಗಲಿದೆ ,ಎಚ್​​ಡಿಕೆ ,ಕಿಡಿ

ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲುಗುಂಟೆಯಲ್ಲಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಸಮುದಾಯ ಭವನದ ಉದ್ಫಾಟನೆ ಹಾಗೂ ವಿವಿಧ ಭದ್ರತಾ ಯೋಜನೆ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ ಭಾಗಿಯಾಗಿದ್ದರು.

ಮುಖ್ಯಮಂತ್ರಿ ಕುಮಾರಸ್ವಾಮಿ

By

Published : Jul 10, 2019, 8:18 PM IST

Updated : Jul 10, 2019, 8:58 PM IST

ನೆಲಮಂಗಲ :ಅತೃಪ್ತ ಶಾಸಕರು ತೆಗೆದುಕೊಳ್ಳುತ್ತಿರುವ ನಿರ್ಧಾರ ನಿಮ್ಮ ಹಾಗೂ ರಾಜ್ಯದ ಭವಿಷ್ಯಕ್ಕೆ ಮಾರಕವಾಗಲಿದೆ. ನಿಮ್ಮ ನಿಲುವನ್ನು ನೀವೇ ಯೋಚಿಸಿ ಎಂದು ವಿರೋಧ ಪಕ್ಷ ಮತ್ತು ಅತೃಪ್ತ ಶಾಸಕರ ವಿರುದ್ಧ ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.

ರಾಜಕೀಯ ಜಂಜಾಟದ ನಡುವೆಯೂ ಸಿಎಂ ಕುಮಾರಸ್ವಾಮಿ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯ ನೂತನ ಕಟ್ಟಡ ಹಾಗೂ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಸಮುದಾಯ ಭವನದ ಉದ್ಫಾಟನೆ ಹಾಗೂ ವಿವಿಧ ಭದ್ರತಾ ಯೋಜನೆ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಸಮಾರಂಭದಲ್ಲಿ ಭಾಗಿಯಾದರು.


ಮುಖ್ಯಮಂತ್ರಿ ಕುಮಾರಸ್ವಾಮಿ
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ನಾನು ಪ್ರತಿಕ್ರಿಯೆ ನೀಡಿಲ್ಲ. ಅದರ ಅವಶ್ಯಕತೆ ನನಗಿಲ್ಲ. ರಾಜಕೀಯ ವಿಚಾರದಲ್ಲಿ ಚರ್ಚೆಗಳು ನಡೆಯಬೇಕಿರುವುದು ವಿಧಾನಸಭೆಯಲ್ಲಿ. ಇದರ ಬಗ್ಗೆ ಇದೇ ತಿಂಗಳ 12ರಂದು ಚರ್ಚೆ ನಡೆಯಲಿದೆ. ವಿರೊಧ ಪಕ್ಷದ ನಾಯಕರು ಕೀಳು ಮಾತುಗಳನ್ನಾಡುತ್ತಿದ್ದಾರೆ. ರಾಜಕೀಯದ ಬಗ್ಗೆ ಅಂದು ಚರ್ಚೆ ಮಾಡಲಾಗುವುದು ಎಂದರು.
Last Updated : Jul 10, 2019, 8:58 PM IST

For All Latest Updates

ABOUT THE AUTHOR

...view details