ಬೆಂಗಳೂರು: ಸಿಡಿಲು, ಗುಡುಗು ಗಾಳಿ ಸಹಿತ ಬಿದ್ದ ಭಾರೀ ಮಳೆಗೆ ಬೆಂಗಳೂರಿನಾದ್ಯಾಂತ ಮರ ಗಿಡಗಳು ಬಿದ್ದಿರುವುದಲ್ಲದೇ ಮನೆಗಳ ಛಾವಣಿಗಳು ಹಾರಿ ಹೋಗಿವೆ. ಇದೇ ವೇಳೆ ಸಿಡುಲು ಬಡಿದು ಒಂದೇ ಊರಿನಲ್ಲಿ 13 ಕುರಿಗಳು ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನೀರಗಂಟಿಪಾಳ್ಯದಲ್ಲಿ ನಡೆದಿದೆ.
ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ: ಸಿಡಿಲು ಬಡಿದು 13 ಕುರಿಗಳ ಸಾವು - Devanahalli
ದೇವನಹಳ್ಳಿಯ ಹಲವು ಕಡೆ ಗುಡುಗು ಸಿಡಿಲು ಸಮೇತ ಭಾರೀ ಮಳೆ ಬಿದ್ದಿದ್ದು, ಸಿಡಿಲ ಬಡಿತಕ್ಕೆ ನೀರಗಂಟಿಪಾಳ್ಯದ ನಿವಾಸಿಗಳಾದ ಮಂಜುನಾಥ್ ಎಂಬುವರಿಗೆ ಸೇರಿದ್ದ 13 ಕುರಿಗಳು ಸಾವನ್ನಪ್ಪಿವೆ.

ಸಿಡಿಲು ಬಡಿದು ಕುರಿಗಳ ಸಾವು
ದೇವನಹಳ್ಳಿಯ ಹಲವು ಕಡೆ ಸಿಡಿಲು ಗುಡುಗು ಸಮೇತ ಭಾರೀ ಮಳೆ ಬಿದ್ದಿದ್ದು, ಸಿಡಿಲ ಬಡಿತಕ್ಕೆ ನೀರಗಂಟಿಪಾಳ್ಯದ ನಿವಾಸಿಗಳಾದ ಮಂಜುನಾಥ್ ಎಂಬುವರಿಗೆ ಸೇರಿದ್ದ 13 ಕುರಿಗಳು ಸಾವನ್ನಪ್ಪಿವೆ. ಕುರಿ ಸಾಕಾಣಿಕೆ ಮಾಡುತ್ತಿದ್ದ ಮಂಜುನಾಥ್ ಮತ್ತು ಅರುಣಾ ದಂಪತಿ 161 ಕುರಿಗಳನ್ನು ಸಾಕಿದ್ರು. ಇದರಲ್ಲಿ ಸಿಡಿಲ ಬಡಿತಕ್ಕೆ 13 ಕುರಿಗಳು ಮೃತಪಟ್ಟಿದ್ದು, ಅದೃಷ್ಟವಶಾತ್ ಮನುಷ್ಯರಿಗೆ ತೊಂದರೆಯಾಗಿಲ್ಲ. ಘಟನೆ ತಿಳಿದ ಕೂಡಲೇ ಪೊಲೀಸರು ಮತ್ತು ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated : May 7, 2019, 11:52 PM IST
TAGGED:
Devanahalli