ಬೆಂಗಳೂರು/ಆನೇಕಲ್: ನೀರಿನ ದಾಹಕ್ಕೆ ಕೆರೆಗೆ ಇಳಿದ ಹಸುವೊಂದು ಹೂಳಿನಲ್ಲಿ ಸಿಲುಕಿಕೊಂಡು ಪರದಾಡಿದ ಘಟನೆ ಆನೇಕಲ್ ತಾಲೂಕಿನ ಬೆಂಗಳೂರು ಸರ್ಜಾಪುರ ರಸ್ತೆಯ ಚಂಬೇನಹಳ್ಳಿ ಕೆರೆಯಲ್ಲಿ ನಡೆದಿದೆ.
ಗ್ರಾಮಸ್ಥರ ಚಾಣಾಕ್ಷತನದಿಂದ ಕೆರೆ ಹೂಳಿನಲ್ಲಿ ಸಿಲುಕಿಕೊಂಡಿದ್ದ ಹಸು ಪಾರು - undefined
ನೀರು ಕುಡಿಯಲು ಹೋಗಿ ಕೆರೆಯ ಹೂಳಿನಲ್ಲಿ ಸಿಲುಕಿಕೊಂಡ ಹಸುವನ್ನು ರಕ್ಷಿಸುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.

ಕೆರೆ ಊಳಿನಲ್ಲಿ ಸಿಲುಕಿಕೊಂಡ ಹಸು
ಕೆರೆ ಊಳಿನಲ್ಲಿ ಸಿಲುಕಿಕೊಂಡ ಹಸು
ಬಾಯಾರಿದ ಹಸು ಕೆರೆ ಅಂಗಳ ಬಿರುಕು ಬಿಟ್ಟಿರುವುದನ್ನು ಲೆಕ್ಕಿಸದೇ ನೀರಿಗಾಗಿ ಕೆರೆಗೆ ಇಳಿದು ಪರದಾಡಿತು. ನಂತರ ಇದನ್ನು ನೋಡಿದ ಗ್ರಾಮಸ್ಥರು ಕೂಡಲೇ ಜೆಸಿಬಿ ಕರೆಸಿ ಹಸುವಿನ ಸುತ್ತ ಗುಂಡಿಯನ್ನು ತೆಗೆದು ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.