ಕರ್ನಾಟಕ

karnataka

ಘಾಟಿ ಸುಬ್ರಹ್ಮಣ್ಯ ಹುಂಡಿ ಎಣಿಕೆ... ದಾಖಲೆ ಪ್ರಮಾಣದಲ್ಲಿ ಕಾಣಿಕೆ ಹಣ ಸಂಗ್ರಹ

By

Published : Jun 25, 2019, 5:57 AM IST

Updated : Jun 25, 2019, 6:50 AM IST

ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ದೇವಸ್ಥಾನಕ್ಕೆ ಬಂದ ಭಕ್ತರು ನೀಡಿದ ಕಾಣಿಕೆ ಹಣ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ.

ಘಾಟಿ ಸುಬ್ರಮಣ್ಯಕ್ಕೆ ಶುಕ್ರದೆಸೆ

ದೊಡ್ಡಬಳ್ಳಾಪುರ : ಈ ವರ್ಷ ಪಶ್ಚಿಮಘಟ್ಟ ಪ್ರದೇಶದ ಕೆಲ ಧಾರ್ಮಿಕ ಕ್ಷೇತ್ರಗಳಿಗೆ ನೀರಿನ ಬರ ತಟ್ಟಿದ ಪರಿಣಾಮ ಬೆಂಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಕ್ಕೆ ಶುಕ್ರದೆಸೆ ಒಲಿದಿದೆ.

ಘಾಟಿ ಸುಬ್ರಮಣ್ಯಕ್ಕೆ ಶುಕ್ರದೆಸೆ

ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಬತ್ತಿದ ಹಿನ್ನೆಲೆ ಸ್ವತಃ ವೀರೇಂದ್ರ ಹೆಗಡೆ ಕ್ಷೇತ್ರಕ್ಕೆ ಭಕ್ತರು ಬರದಂತೆ ವಿನಂತಿ ಮಾಡಿದರು. ಈ ಹಿನ್ನೆಲೆಯಲ್ಲಿ ಭಕ್ತರು ಬೆಂಗಳೂರು ಸುತ್ತಮುತ್ತಲಿನ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದು, ದೊಡ್ಡಬಳ್ಳಾಪುರದ ಘಾಟಿಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕಾಣಿಕೆ ಹಣದಲ್ಲಿ ಭಾರೀ ಏರಿಕೆಯಾಗಿದೆ.ಜೂನ್ ತಿಂಗಳಲ್ಲಿ 49,85,893 ರೂ ಹಣ ಸಂಗ್ರಹವಾಗಿದೆ. ಆಡಳಿತಾಧಿಕಾರಿ ಸಮ್ಮುಖದಲ್ಲಿ ಹಣ ಎಣಿಕೆ ಕಾರ್ಯ ಮಾಡಲಾಗಿದೆ.

ಆಶ್ಚರ್ಯವೆಂದರೆ ಯೂರೋಪ್, ಮಲೇಷಿಯಾ, ಅಮೆರಿಕ, ದುಬೈ ದೇಶದ ಕರೆನ್ಸಿಗಳು ಹುಂಡಿಯಲ್ಲಿ ಪತ್ತೆಯಾಗಿದೆ. 50‌ರ ಮುಖ ಬೆಲೆಯ 14 ಡಾಲರ್, ಓಮನ್ ದೇಶದ 37 ನೋಟುಗಳು ಸಿಕ್ಕಿವೆ. ಇಷ್ಟೆ ಅಲ್ಲದೆ ಭಾರತದ ನಿಷೇಧಿತ 500, 1000 ಮುಖ ಬೆಲೆಯ ನೋಟುಗಳು ಸಹ ಪತ್ತೆಯಾಗಿವೆ.

ಹುಂಡಿಯಲ್ಲಿ 4 ಗ್ರಾಂ ಚಿನ್ನ, 2180 ಗ್ರಾಂ ಬೆಳ್ಳಿ ವಸ್ತುಗಳು ಸಿಕ್ಕಿದೆ. ಇನ್ನು ಆಡಳಿತ ಮಂಡಳಿ ಎಣಿಕೆ ಕಾರ್ಯದಲ್ಲಿ ಭಕ್ತರಿಗೂ ಅವಕಾಶವನ್ನು ನೀಡಿತ್ತು. ಹುಂಡಿ ಹಣ ಏಣಿಕೆ ಕಾರ್ಯ ಸಂಪೂರ್ಣವಾಗಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Last Updated : Jun 25, 2019, 6:50 AM IST

ABOUT THE AUTHOR

...view details