ಕರ್ನಾಟಕ

karnataka

ETV Bharat / state

ಪ್ರಕೃತಿ ಚಿಕಿತ್ಸಾಲಯದಲ್ಲಿ ವ್ಯಾಯಾಮ, ವಿಶ್ರಾಂತಿಯಲ್ಲಿ  ತೆಲಗು ಟೈಟನ್ಸ್​ ಆಟಗಾರರು!

ಪ್ರಕೃತಿ ಮಡಿಲಲ್ಲಿ ತೆಲುಗು ಟೈಟನ್ಸ್ ತಂಡದ ಆಟಗಾರರು ಯೋಗ ಕಸರತ್ತು ನಡೆಸುತ್ತಾ ವಿಶ್ರಾಂತಿ ಪಡೆಯುತ್ತಿದ್ದಾರೆ.

Telugu Titans squad for Pro Kabaddi 2019

By

Published : Sep 5, 2019, 11:43 PM IST

ನೆಲಮಂಗಲ:ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಬ್ಬಡಿ ಸೀಸನ್​​ನ ಲೀಗ್ ಪಂದ್ಯಾವಳಿ ಮಗಿಯಲು ದಿನಗಣನೆ ಶುರುವಾಗಿದೆ. ಆದರೆ, ಪ್ರಕೃತಿ ಮಡಿಲಲ್ಲಿ ತೆಲುಗು ಟೈಟನ್ಸ್ ತಂಡದ ಆಟಗಾರರು ಯೋಗ, ಕಸರತ್ತು ನಡೆಸುತ್ತಾ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮಾನಸಿಕ ಒತ್ತಡವು ಹೆಚ್ಚಾಗಿರುವ ಪರಿಣಾಮ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಸೋಲೂರು ಬಳಿಯ ಎಂ.ಆರ್.ಆರ್. ಪ್ರಕೃತಿ ಚಿಕಿತ್ಸಾಲಯದಲ್ಲಿ ತೆಲುಗು ಟೈಟನ್ಸ್ ತಂಡದ ಆಟಗಾರರು ಚಿಕಿತ್ಸೆ ಜೊತೆಗೆ ನ್ಯೂರೋ ತೆರಪಿಗೆ ಒಳಾಗಾಗಿದ್ದಾರೆ.

ತೆಲುಗು ಟೈಟನ್ಸ್​ ತಂಡದ ನಾಯಕ, ಫರ್ಹಾದ್, ಸಿದ್ದಾಥ್೯, ಅರುಣ್, ಬಿಷಾಲ್, ಸೌರಭ್ ದೇಸಾಯಿ ಹೀಗೆ ಎಲ್ಲರ ಜೊತೆ ಕೋಚ್ ಮತ್ತು ಮಾಲೀಕರು ಪ್ರಕೃತಿ ಚಿಕಿತ್ಸಾಲಯದಲ್ಲಿ ಯೋಗಾಭ್ಯಾಸ, ಜಿಮ್​​ನಲ್ಲಿ ಸಖತ್ ವರ್ಕೌಟ್ ಮಾಡಿದ್ದಾರೆ.

ತೆಲುಗು ಟೈಟನ್ಸ್ ತಂಡದ ಆಟಗಾರರು

ಇನ್ನೂ ಕಬ್ಬಡ್ಡಿ ಸೀಮಿತ ಅವಧಿಯಲ್ಲಿ ಗರಿಷ್ಠ ಪ್ರಮಾಣದ ಫಿಟ್ ನೇಸ್ ಪ್ರದರ್ಶೀಸಬೇಕಾದದ್ದು, ಆಟಗಾರರ ಕೌಶಲ್ಯ ಹೆಚ್ಚೀರಬೇಕಾಗುತ್ತದೆ. ಆದ್ದರಿಂದ ಇಲ್ಲಿನ ವೈದ್ಯರ ತಂಡ, ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗುವ ಜೊತೆಗೆ ಆಟದ ವೇಳೆಯಲ್ಲಿ ಆಟಗಾರರು ಜಡತ್ವ ನಿವಾರಿಸಲು ಉಸಿರಾಟದ ಸಮರ್ಪಕ ಬಳಕೆ, ಏಕಾಗ್ರತೆ, ಮಾನಸಿಕ ಸಮತೋಲನ, ಪ್ರಾಣಾಯಮವನ್ನು ಅಭ್ಯಾಸ ಮಾಡಿಸಿದ್ದಾರೆ.

ಪ್ರಕೃತಿಯ ಮಡಿಲಲ್ಲಿರುವ ಎಂ.ಆರ್.ಆರ್.ಆಸ್ಪತ್ರೆಯಲ್ಲಿ ಯೋಗಿಕ್ ಡಯಟ್ ಜೊತೆಗೆ ನಿರ್ದಿಷ್ಟ ಕ್ಯಾಲೋರಿ ಆಹಾರದ ಸೇವನೆ ಬಗ್ಗೆ ಸಹ ಆಟಗಾರರಿಗೆ ತಿಳಿಸಿಕೊಟ್ಟಿದ್ದಾರೆ. ತೆಲುಗು ಟೈಟಾನ್ಸ್ ತಂಡದ ಆಟಗಾರರು ಹೊಸ ಹುರುಪಿನಿಂದ ಮುಂದಿನ‌ ಪಂದ್ಯಗಳಲ್ಲಿ ತಮ್ಮ ಪ್ರದರ್ಶನವನ್ನು ಪ್ರದರ್ಶಿಸಲ್ಲಿದ್ದಾರೆ ಎಂದು ಪ್ರಕೃತಿ ಮುಖ್ಯವೈದ್ಯಾಧಿಕಾರಿ ಡಾ.ಚೇತನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details