ನೆಲಮಂಗಲ: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ ಮೇರೆಗೆ ತಹಶೀಲ್ದಾರ್ ಕೆ.ಮಂಜುನಾಥ್ ನಗರದ ಗಾರ್ಮೆಂಟ್ಸ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಾರ್ಮೆಂಟ್ಸ್ಗಳಿಗೆ ತಹಶೀಲ್ದಾರ್ ದಿಢೀರ್ ಭೇಟಿ, ಪರಿಶೀಲನೆ ಜನತಾ ಕರ್ಫ್ಯೂ ಉಲ್ಲಂಘನೆ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಿರುವ ಜಿಲ್ಲಾಧಿಕಾರಿಗಳು ಹಾಗೂ ಗಾರ್ಮೆಂಟ್ಸ್ಗಳಲ್ಲಿ 50%ಕ್ಕಿಂತ ಹೆಚ್ಚು ಕೆಲಸಗಾರರು ಇದ್ದಲ್ಲಿ ಅಂತಹವರ ವಿರುದ್ಧ ಕ್ರಮಕ್ಕೆ ಆದೇಶಿಸಿದ ಹಿನ್ನೆಲೆಯಲ್ಲಿ ನೆಲಮಂಗಲ ಹೊರವಲಯದ ಮೈಲನಹಳ್ಳಿ ಬಳಿಯ ಗಾರ್ಮೆಂಟ್ಸ್ಗಳಗೆ ತಹಶಿಲ್ದಾರ್ ಕೆ. ಮಂಜುನಾಥ್ ಭೇಟಿ ನೀಡಿ ಪರಿಶಿಲನೆ ನಡೆಸಿದರು.
ಟೆಕ್ಸ್ ಪೋರ್ಟ್ ಗಾರ್ಮೆಂಟ್ಸ್ಗೆ ಭೇಟಿ ನೀಡಿದ ತಹಶೀಲ್ದಾರ್, ಸಾಮಾಜಿಕ ಅಂತರವಿಲ್ಲದೇ ಕಾರ್ಯನಿರತ ಹೆಚ್ಚುವರಿ ನೌಕರರಿದ್ದ ಕಾರಣ ಕಾರ್ಮಿಕರನ್ನು ಬೇರೊಂದು ಫ್ಲೋರ್ಗೆ ಸ್ಥಳಾಂತರಿಸಿ ಆದೇಶ ಉಲ್ಲಂಘನೆ ಮಾಡಿದರೆ ಗಾರ್ಮೆಂಟ್ಸ್ ಸೀಲ್ ಡೌನ್ ಮಾಡುವುದಾಗಿ ಮ್ಯಾನೇಜರ್ಗೆ ಎಚ್ಚರಿಕೆ ನೀಡಿದರು.
ನೆಲಮಂಗಲ ಪಟ್ಟಣದಲ್ಲಿನ ಸಂತೆ ಬೀದಿಯಲ್ಲಿ ಕರ್ಫ್ಯೂ ಉಲ್ಲಂಘಿಸಿದ ಜನರು, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಅಗತ್ಯ ವಸ್ತುಗಳನ್ನು ಕೊಳ್ಳಲು ಬಂದ ಜನರು ತಮ್ಮ ಬೈಕ್ ಹಾಗೂ ಕಾರ್ಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿದ್ದರಿಂದ ಇತರ ವಾಹನ ಸವಾರರಿಗೂ ಟ್ರಾಫಿಕ್ ಕಿರಿಕಿರಿ ಉಂಟಾಯಿತು.
ಓದಿ : ದೊಡ್ದ ಪ್ರಮಾಣದಲ್ಲಿ ಲಸಿಕೆ ಲಭ್ಯವಿಲ್ಲ .. ಅಭಿಯಾನಕ್ಕೆ ಸಾಂಕೇತಿಕ ಚಾಲನೆ : ಸಚಿವ ಸುಧಾಕರ್