ಕರ್ನಾಟಕ

karnataka

ETV Bharat / state

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಪಿ.ಸಿ.ಮೋಹನ್​​ ಪರ ತಾರಾ ಪ್ರಚಾರ - undefined

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ ಅವರ ಪರ ನಟಿ ತಾರಾ ಸರ್ವಜ್ಞನಗರ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ರು.

ಅಭ್ಯರ್ಥಿ ಪಿ.ಸಿ. ಮೋಹನ್ ಪರ ತಾರಾ ಪ್ರಚಾರ

By

Published : Apr 1, 2019, 9:19 AM IST

ಬೆಂಗಳೂರು: ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದಂತೆ ಪ್ರಚಾರದ ಭರಾಟೆ ಹೆಚ್ಚಾಗಿದ್ದು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ ಪರ ನಟಿ ತಾರಾ ಸರ್ವಜ್ಞನಗರ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ರು.

ಈ ವೆಳೆ ಮಾತನಾಡಿದ ಅವರು, ರಾಜ್ಯದಲ್ಲಿ ದೊಸ್ತಿ ಪಕ್ಷಗಳು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರು ವಂಶ ರಾಜಕೀಯದ ಮೂಲಕ ದೇಶದ ಅಭಿವೃದ್ಧಿ ನಿರ್ಲಕ್ಷಿಸಿದ್ದಾರೆಂದು ದೂರಿದರು. ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ದೊಸ್ತಿ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ಕೂಡ ನುಡಿದರು.

ಅಭ್ಯರ್ಥಿ ಪಿ.ಸಿ. ಮೋಹನ್ ಪರ ತಾರಾ ಪ್ರಚಾರ

ಅಭಿವೃದ್ಧಿ ಕುರಿತು ಪ್ರಣಾಳಿಕೆಯಲ್ಲಿ ಮಾತ್ರ ಸಿಮೀತ ಮಾಡದೆ, ಕಾರ್ಯರೂಪಕ್ಕೆ ತರುವುದೆ ನಮ್ಮ ಬಿಜೆಪಿ ಪಕ್ಷದ ಕೆಲಸವೆಂದರು. ರಾಷ್ಟ್ರದ ಅಭಿವೃದ್ಧಿ ಹಾಗೂ ರಕ್ಷಣೆಯಲ್ಲಿ ಯಾವುದೇ ಹೊಂದಾಣಿಕೆ ಮಾಡದೆ ಅಭಿವೃದ್ಧಿ ಮಾಡಿರುವುದೇ ನಮ್ಮ ಪ್ರಧಾನಿ ಮೋದಿ ಅವರ ಸಾಧನೆ ಎಂದರು.

ಕೇಂದ್ರ ಲೋಕಸಭಾ ಅಭ್ಯರ್ಥಿ ಪಿ.ಸಿ. ಮೋಹನ್ ಅವರಿಗೆ ಈ ಬಾರಿ ಕ್ಷೇತ್ರದಲ್ಲಿ ಮುನ್ನಡೆ ನೀಡುವ ಮೂಲಕ ಗೆಲುವು ತಂದು ಕೋಡುತ್ತೇವೆ. ಬೆಂಗಳೂರು ನಗರಕ್ಕೆ ವಿಶೇಷ ಸವಲತ್ತುಗಳನ್ನು ಪಡೆಯಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಬೇಕೆಂದು ಮಾಜಿ ಪಾಲಿಕೆ ಸದಸ್ಯ ಗೋವಿಂದರಾಜು ಅವರು ಮನವಿ ಮಾಡಿದರು.

For All Latest Updates

TAGGED:

ABOUT THE AUTHOR

...view details