ಕರ್ನಾಟಕ

karnataka

ETV Bharat / state

ಕಮಿಷನ್​ ಇಲ್ಲದೆ ಯಾವುದೇ ಇಲಾಖೆಗಳು ನಡೆಯುತ್ತಿಲ್ಲ: ಬಿಜೆಪಿ ವಿರುದ್ಧ ಉಗ್ರಪ್ಪ ವಾಗ್ದಾಳಿ - ಪಿಎಸ್ಐ ನೇಮಕಾತಿ ಹಗರಣ

ರಾಜ್ಯದಲ್ಲಿ ಕಮಿಷನ್​ ಇಲ್ಲದೇ ಯಾವುದೇ ಇಲಾಖೆ ನಡೆಯುತ್ತಿಲ್ಲ. ಆದರೆ, ಪ್ರಧಾನಿ ಮೋದಿ ಹೇಳುತ್ತಾರೆ ನಾನೂ ತಿನ್ನುವುದಿಲ್ಲ ಮತ್ತೊಬ್ಬರಿಗೂ ತಿನ್ನಲು ಬಿಡಲ್ಲ ಎಂದು ಬಿಜೆಪಿ ವಿರುದ್ದ ಮಾಜಿ ಸಂಸದ ಉಗ್ರಪ್ಪ ಟೀಕಾ ಪ್ರಹಾರ ನಡೆಸಿದರು.

kn_bng
​ವಿ.ಎಸ್ ಉಗ್ರಪ್ಪ

By

Published : Dec 17, 2022, 9:39 PM IST

Updated : Dec 17, 2022, 9:51 PM IST

ಉಗ್ರಪ್ಪ ವಾಗ್ದಾಳಿ

ದೊಡ್ಡಬಳ್ಳಾಪುರ: ಮೋದಿ ಯಾವಾಗ್ಲೂ ಹೇಳುತ್ತಾರೆ ನಾನು ತಿನ್ನುವುದಿಲ್ಲ, ಮತ್ತೊಬ್ಬರಿಗೆ ತಿನ್ನಲು ಬಿಡುವುದಿಲ್ಲವೆಂದು ಆದರೆ ಇಂದು ರಾಜ್ಯದಲ್ಲಿ ಕಮಿಷನ್ ಇಲ್ಲದೆ ಯಾವ ಇಲಾಖೆಯಲ್ಲೂ ಕೆಲಸ ನಡೆಯುವುದಿಲ್ಲವೆಂದು ಮಾಜಿ ಸಂಸದ ವಿ.ಎಸ್​ ಉಗ್ರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಹೊರವಲಯದ ಆರ್​ಎಲ್​ಆರ್​ಎಲ್​ಜೆಐಟಿ ಕ್ಯಾಂಪಸ್​ನಲ್ಲಿ ಜಾಲಪ್ಪನವರ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು, ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದ ಪ್ರತಿಯೊಂದು ಇಲಾಖೆಯಲ್ಲಿ ಕಮಿಷನ್​ ಇಲ್ಲದೆ ಕೆಲಸ ನಡೆಯುತ್ತಿಲ್ಲ. ಆದರೇ ಮೋದಿ ಹೇಳ್ತಾರೆ 'ನಾನು ತಿನ್ನುವುದಿಲ್ಲ, ಮತ್ತೊಬ್ಬರಿಗೆ ತಿನ್ನಲು ಬಿಡಲ್ಲ ಎಂದು. ಇನ್ನು ಪಿಎಸ್ಐ ನೇಮಕಾತಿ ಹಗರಣವನ್ನ ವಿಧಾನಸಭೆಯಲ್ಲಿ ನಾನು ಪ್ರಸ್ತಾಪ ಮಾಡಿದ್ದೇನೆ. ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಡಿಜಿಪಿ ಸೇರಿದಂತೆ ಹೆಚ್ಚು ಜನರ ಬಂಧನವಾಗಿದೆ. ಇಷ್ಟೇಲ್ಲ ಆದರೂ ಅವರು ಏನು ನಡಿದೇ ಇಲ್ಲ ಎಂಬಂತಿದ್ದಾರೆ.

ಹಗರಣದ ಹೊಣೆ ಸರ್ಕಾರ ಹೊರುತ್ತಾ, ಇಲ್ಲಾ ಬಿಜೆಪಿ ಪಕ್ಷ ಹೊರುತ್ತಾ ಅಥವಾ ಮುಖ್ಯಮಂತ್ರಿ ಹೊರ್ತಾರಾ, ಇಷ್ಟೆಲ್ಲ ಹಗರಣ ನಡೆದರೂ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಇದನ್ನೆಲ್ಲ ನೋಡುತ್ತಿದ್ದಾರೆ ಬಿಜೆಪಿ ಪಕ್ಷ ಭ್ರಷ್ಟಾಚಾರದ ಜೊತೆ ರಾಜಿ ಮಾಡಿಕೊಂಡಿರುವಂತೆ ಕಾಣಿಸುತ್ತದೆ ಎಂದರು. ಪ್ರಬುದ್ಧ ಮತದಾರರು ಇದನ್ನೆಲ್ಲ ಗಮನಿಸುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆ ಮತ್ತು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪಕ್ಷವನ್ನ ಮನೆಗೆ ಕಳಿಸುತ್ತಾರೆ ಎಂದು ಟೀಕಿಸಿದರು.

1947ರಲ್ಲಿ ಸ್ವಾತಂತ್ರ್ಯ ಪಡೆದ ಭಾರತದಲ್ಲಿ 300 ಬೃಹತ್ ನೀರಾವರಿ ಯೋಜನೆ ಇದ್ದವು, 2014 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಿಂದ ಇಳಿಯುವಾಗ ಭಾರತದಲ್ಲಿ 5003 ಬೃಹತ್ ನೀರಾವರಿ ಯೋಜನೆಗಳು ಇದ್ದವು, ಕಳೆದ 8 ವರ್ಷಗಳ ಅವಧಿಯಲ್ಲಿ ಬಿಜೆಪಿ ಪಕ್ಷ ಒಂದೇ ಒಂದು ನೀರಾವರಿ ಯೋಜನೆ ಜಾರಿಗೆ ತಂದಿಲ್ಲ. ನೀರಾವರಿ, ರೈತರು ಮತ್ತು ಸಾಮಾಜಿಕ ವಿಚಾರಗಳ ಬಗ್ಗೆ ಅವರಿಗೆ ಬದ್ಧತೆ ಇ.ಲ್ಲ ಭ್ರಷ್ಟಾಚಾರದಿಂದ ಲೂಟಿ ಮಾಡಿದ ಹಣದಲ್ಲಿ ಚುನಾವಣೆ ಗೆಲ್ಲಬಹುದೆಂಬ ಪ್ರಯತ್ನದಲ್ಲಿದ್ದಾರೆಂದು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಡಿಕೆ ಶಿವಕುಮಾರ್​​ಗೆ ಭಯೋತ್ಪಾದಕರೇ ಬ್ರದರ್ಸ್: ರಾಜ್ಯ ಬಿಜೆಪಿ ಟ್ವೀಟ್​

Last Updated : Dec 17, 2022, 9:51 PM IST

ABOUT THE AUTHOR

...view details