ಹೊಸಕೋಟೆ: ಅಭಿವೃದ್ಧಿ ಕಾರ್ಯ ಮಾಡುವುದು ಸಂವಿಧಾನ ವಿರೋಧಿಯೇ? ನಾವು ಅರ್ಹರೋ ಅಥವಾ ಅನರ್ಹರೋ ಎಂಬುದನ್ನು ಸುಪ್ರೀಂ ಕೋರ್ಟ್ ತೀರ್ಮಾನಿಸುತ್ತೆ ಎಂದು ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದಾರೆ.
ನಾವು ಅರ್ಹರೋ, ಅನರ್ಹರೋ ಸುಪ್ರೀಂ ತೀರ್ಮಾನಿಸುತ್ತೆ: ಎಂಟಿಬಿ - MTB nagraj in Hosakote
ಅಭಿವೃದ್ಧಿಯಲ್ಲಿ ರಾಜಕೀಯ ಬೇಡ. ನೀವು ಸಹ ನಮ್ಮ ಜೊತೆಯಲ್ಲಿ ಬಂದು ಪೂಜೆ ಮಾಡಿ ಅದಕ್ಕೆ ನಮ್ಮ ವಿರೋಧವಿಲ್ಲ. ನಾವು ಅರ್ಹರೋ ಅಥವಾ ಅನರ್ಹರೋ ಎಂಬುದನ್ನು ಸುಪ್ರೀಂ ಕೋರ್ಟ್ ತೀರ್ಮಾನಿಸುತ್ತೆ ಎಂದು ಎಂಟಿಬಿ ನಾಗರಾಜ್ ಕಿಡಿಕಾರಿದ್ದಾರೆ.
ಎಂಟಿಬಿ ನಾಗರಾಜ್ ಕಿಡಿಎಂಟಿಬಿ ನಾಗರಾಜ್ ಕಿಡಿ
ಅಭಿವೃದ್ಧಿಯಲ್ಲಿ ರಾಜಕೀಯ ಬೇಡ. ನೀವು ಸಹ ನಮ್ಮ ಜೊತೆಯಲ್ಲಿ ಬಂದು ಪೂಜೆ ಮಾಡಿ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅಭಿವೃದ್ಧಿ ಸಹಿಸದೇ ಕೇವಲ ರಾಜಕೀಯ ಮಾಡಿದರೆ ಒಳಿತಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ಮತದಾರರು ಉತ್ತರ ನೀಡಲಿದ್ದಾರೆ ಎಂದರು.
ಜನ ಕಾರ್ಯಕ್ರಮಕ್ಕೆ ಕರೆಯುತ್ತಾರೆ ನಾನು ಹೋಗುತ್ತೇನೆ. ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲಿಸುತ್ತೇನೆ. ಅದನ್ನು ಸಂವಿಧಾನ ವಿರೋಧಿ ಎನ್ನುತ್ತಾರೆ. ಕಾಮಗಾರಿ ಪರಿಶೀಲನೆ ಮಾಡುವುದು ತಪ್ಪಾ? ಅಭಿವೃದ್ಧಿ ಕಾರ್ಯ ಮಾಡುವುದು ಸಂವಿಧಾನ ವಿರೋಧಿಯಾ ಎಂದು ಎಂಟಿಬಿ ಪ್ರಶ್ನಿಸಿದರು.