ಕರ್ನಾಟಕ

karnataka

ETV Bharat / state

ದೇವನಹಳ್ಳಿ: ಬಿಎಂಟಿಸಿ ಬಸ್ ಹಾಗೂ ಟ್ಯಾಕ್ಸಿಗಳ ಸಂಚಾರ - ದೇವನಹಳ್ಳಿನಲ್ಲಿ ಸಂಡೇ ಕರ್ಫ್ಯೂ

ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಭಾನುವಾರ ಕರ್ಫ್ಯೂ ಜಾರಿ ಮಾಡಿದೆ. ಆದರೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎಂದಿನಂತೆ ಬಿಎಂಟಿಸಿ ಬಸ್ ಹಾಗೂ ಟ್ಯಾಕ್ಸಿಗಳ ಸಂಚಾರ ಕಂಡುಬಂತು.

BMTC bus and taxi travelling as usual
ಎಂದಿನಂತೆ ಬಿಎಂಟಿಸಿ ಬಸ್ ಹಾಗೂ ಟ್ಯಾಕ್ಸಿ ಸಂಚಾರ

By

Published : Jul 5, 2020, 10:59 AM IST

ದೇವನಹಳ್ಳಿ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ಭಾನುವಾರ ಕರ್ಫ್ಯೂ ಜಾರಿ ಆದೇಶ ಹೊರಡಿಸಿದೆ. ಆದರೆ ವಿಮಾನ ನಿಲ್ದಾಣದಲ್ಲಿ ಬಿಎಂಟಿಸಿ ಬಸ್​ಗಳು, ಟ್ಯಾಕ್ಸಿ, ಕ್ಯಾಬ್​ಗಳು ಬೆಳಗ್ಗೆಯಿಂದಲೇ ಸಂಚರಿಸುತ್ತಿರುವುದು ಕಾಣಿಸಿತು.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎಂದಿನಂತೆ ಬಿಎಂಟಿಸಿ ಬಸ್ ಹಾಗೂ ಟ್ಯಾಕ್ಸಿಗಳ ಸಂಚಾರ

ಏರ್ ಟಿಕೆಟ್ ಇದ್ದ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಟ್ಯಾಕ್ಸಿ ಚಾಲಕರಿಗೆ ಅವಕಾಶ ನೀಡಲಾಗಿದ್ದು, ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರು ರಾತ್ರಿಯೇ ಏರ್‌ಪೋರ್ಟ್​ ತಲುಪಿದ್ದಾರೆ. ಬೆಂಗಳೂರಿನ ವಿವಿಧ ಭಾಗಗಳಿಗೆ ಸಂಪರ್ಕಿಸುವ ಬಿಎಂಟಿಸಿಯ ವಾಯು ವಜ್ರ ಬಸ್‌ಗಳು ಸಂಚರಿಸುತ್ತಿದ್ದು, ಮಧ್ಯಾಹ್ನದ ನಂತರ ಬಸ್​ಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ.

ABOUT THE AUTHOR

...view details