ನೆಲಮಂಗಲ: ವೇಗವಾಗಿ ಹೋಗುತ್ತಿದ್ದ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಬರುತ್ತಿದ್ದ ಸ್ವಿಫ್ಟ್ ಕಾರು ಲಾರಿಗೆ ಡಿಕ್ಕಿ ಹೊಡೆದು ಕಾರಿನ ಚಾಲಕ ಮೃತಪಟ್ಟಿರುವ ಘಟನೆ ನೆಲಮಂಗಲ ಹೊರವಲಯದ ಮಾದವರ ಸಮೀಪದ ನೈಸ್ ರಸ್ತೆಯ ನವಿಲೆ ಲೇಔಟ್ ಬಳಿ ನಡೆದಿದೆ.
ಸಡನ್ ಬ್ರೇಕ್ ಹಾಕಿದ ಕಂಟೈನರ್ ಚಾಲಕ: ಸ್ವಿಫ್ಟ್ ಕಾರು ಚಾಲಕ ಸಾವು - undefined
ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಬರುತ್ತಿದ್ದ ಸ್ವಿಫ್ಟ್ ಕಾರು ಲಾರಿಗೆ ಡಿಕ್ಕಿ ಹೊಡೆದು ಕಾರಿನ ಚಾಲಕ ಮೃತಪಟ್ಟಿರುವ ಘಟನೆ ನೆಲಮಂಗಲ ಹೊರವಲಯದ ಮಾದವರ ಸಮೀಪದ ನೈಸ್ ರಸ್ತೆಯ ನವಿಲೆ ಲೇಔಟ್ ಬಳಿ ನಡೆದಿದೆ.

ಕಂಟೈನರ್ಗೆ ಡಿಕ್ಕಿ ಹೊಡೆದು ಸ್ವಿಪ್ಟ್ ಕಾರು ಪಲ್ಟಿ
ಘಟನೆಯಲ್ಲಿ ಕಾರಿನ ಚಾಲಕ ಸುರೇಶ್ ಕುಮಾರ್ ( 28) ಮೃತಪಟ್ಟಿದ್ದಾನೆ. ಮಾದವರ ಟೋಲ್ ಕಡೆಗೆ ಕಂಟೈನರ್ ಲಾರಿ ವೇಗವಾಗಿ ಹೋಗುತ್ತಿತ್ತು. ಅದರ ಹಿಂದೆಯೇ ಸುರೇಶ್ ಕುಮಾರ್ ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ಕಂಟೈನರ್ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿ ಸ್ವಿಫ್ಟ್ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಕಂಟೈನರ್ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ
ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದ್ದು, ಕಾರಿನ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ನೆಲಮಂಗಲ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.