ಕರ್ನಾಟಕ

karnataka

ETV Bharat / state

ಬೆಂಗಳೂರು ಗ್ರಾಮಾಂತರ: ಕಾಲೇಜು ಬಂದ್​ ಮಾಡಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎನ್​​​​ಎಸ್​​​​ಯುಐ ವಿದ್ಯಾರ್ಥಿ ಘಟಕದಿಂದ ಬಂದ್​ಗೆ ಕರೆ, ಕಾಲೇಜು ಬಂದ್​ ಮಾಡಿ ವಿದ್ಯಾರ್ಥಿಗಳಿಂದ ಪ್ರತಿಭಟನೆ.

students-protest-by-closing-the-college
ಬೆಂಗಳೂರು ಗ್ರಾಮಾಂತರ: ಕಾಲೇಜು ಬಂದ್​ ಮಾಡಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

By

Published : Dec 17, 2022, 3:30 PM IST

Updated : Dec 17, 2022, 4:56 PM IST

ಬೆಂಗಳೂರು ಗ್ರಾಮಾಂತರ: ಕಾಲೇಜು ಬಂದ್​ ಮಾಡಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ದೇವನಹಳ್ಳಿ:ಕಾಲೇಜು ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಎನ್​ಎಸ್​ಯುಐ ವಿದ್ಯಾರ್ಥಿ ಘಟಕ ರಾಜ್ಯದ ಕಾಲೇಜು ಬಂದ್​ಗೆ ಕರೆ ನೀಡಿದೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಹೊರವಲಯದ ಪದವಿ ಪೂರ್ವ ಕಾಲೇಜು ಬಂದ್ ಮಾಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳಿಗೆ ಎನ್​ಎಸ್​ಯುಐ ವಿದ್ಯಾರ್ಥಿ ಘಟಕದ ಗ್ರಾಮಾಂತರ ಅಧ್ಯಕ್ಷ ಮುಖೇಶ್​ ಹಾಗೂ ದೇವನಹಳ್ಳಿ ಕಾಂಗ್ರೆಸ್​ ಮುಖಂಡ ಆನಂದ್​ಕುಮಾರ್​ ಸಾಥ್​ ನೀಡಿದ್ದು, ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇಂದು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.

ಕಾಲೇಜಿನಿಂದ ಹೊರ ಬಂದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ವಿದ್ಯಾರ್ಥಿನಿ ಚಂದು ಮಾತನಾಡಿ ವಿದ್ಯಾರ್ಥಿ ವೇತನ ನೀಡಲು ಸರ್ಕಾರ ಸತಾಯಿಸುತ್ತಿದ್ದು, ಕಂಪ್ಯೂಟರ್ ಶಿಕ್ಷಣವೂ ನೀಡುತ್ತಿಲ್ಲ ಅಂತಾ ಆರೋಪಿಸಿದರು.

ದೇವನಹಳ್ಳಿ ಹೊರವಲಯದಲ್ಲಿ ಕಾಲೇಜು ಇದ್ದು, ನಮಗೆ ಕೆಎಸ್​ಆರ್​ಟಿಸಿ ಬಸ್​ ಪಾಸ್​ ಇದ್ದರು ಕಾಲೇಜು ಬಳಿ ನಿಲ್ಲಿಸಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಿಲ್ಲ ಎಂದರು.

ಇನ್ನೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್​ ಮುಖಂಡ ಆನಂದ್​ ಕುಮಾರ್​, ಕಾಂಗ್ರೆಸ್​ ಸರ್ಕಾರ ಆಡಳಿತದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ವಿದ್ಯಾರ್ಥಿಗಳ ಹಿತವನ್ನ ಕಾಪಾಡಲಾಗುತ್ತಿತ್ತು. ಆದರೆ, ಕಾಲೇಜುಗಳಲ್ಲಿ ಇದೀಗ ಗುಣಮಟ್ಟದ ಶಿಕ್ಷಣ ನೀಡಲು ಸವಲತ್ತುಗಳನ್ನ ನೀಡದೇ ಕಿತ್ತುಕೊಂಡಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಕಾಲೇಜು ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕೊಲೆ ಶಂಕೆ

Last Updated : Dec 17, 2022, 4:56 PM IST

ABOUT THE AUTHOR

...view details