ನೆಲಮಂಗಲ:ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ನೀರು ತುಂಬಿದ್ದ ಕ್ರಷರ್ ಹೊಂಡದಲ್ಲಿ ಮುಳುಗಿ ಸಾವಿಗೀಡಾರುವ ಘಟನೆ ನೆಲಮಂಗಲ ತಾಲೂಕಿನ ನರಸೀಪುರದಲ್ಲಿ ಗ್ರಾಮದಲ್ಲಿ ಸಂಭವಿಸಿದೆ. ಆತ್ಮರಾಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಪವನ್ (16) ಮೃತಪಟ್ಟ ಬಾಲಕ.
ಮತ್ತಷ್ಟು ವಿವರ: ನಿನ್ನೆ ಶಾಲೆ ಮುಗಿದ ನಂತರ ಮಧ್ಯಾಹ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದಾನೆ. ಕ್ರಷರ್ ಹೊಂಡದಲ್ಲಿ ಈಜುತ್ತಿದ್ದಾಗ ಆಳವಿರುವ ತಗ್ಗಿನ ಪ್ರದೇಶದಲ್ಲಿ ಸಿಲುಕಿದ್ದ. ನಿನ್ನೆ ಶವ ಪತ್ತೆಯಾಗಿರಲಿಲ್ಲ. ಇಂದು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಶವ ಹೊರತೆಗೆದರು. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.