ದೊಡ್ಡಬಳ್ಳಾಪುರ: ಹೊಟ್ಟೆ ನೋವಿನ ವೇದನೆ ತಾಳಲಾರದೆ ವ್ಯಕ್ತಿವೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹೊಟ್ಟೆನೋವು ತಾಳಲಾರದೆ ರೈಲಿಗೆ ತಲೆಕೊಟ್ಟ ವ್ಯಕ್ತಿ - undefined
ಹೊಟ್ಟೆ ನೋವು ತಾಳಲಾರದೆ ವ್ಯಕ್ತಿವೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುಡಿತಕ್ಕೆ ದಾಸನಾಗಿದ್ದ ಈ ವ್ಯಕ್ತಿಗೆ ರೋಗ ಮತ್ತಷ್ಟು ಉಲ್ಬಣಗೊಂಡು ಅತಿಯಾಗಿ ನೋವು ಕಾಡಲಾರಂಭಿಸಿತ್ತು. ಈ ನೋವನ್ನು ತಾಳಲಾರದೇ ದೊಡ್ಡಬಳ್ಳಾಪುರದ ನಂದಿಮೋರಿ ಬಳಿ ರೈಲಿಗೆ ಬಿದ್ದು ಸಾವಿನ ಕಮನೆ ಕದ್ದ ತಟ್ಟಿದ್ದಾನೆ.
![ಹೊಟ್ಟೆನೋವು ತಾಳಲಾರದೆ ರೈಲಿಗೆ ತಲೆಕೊಟ್ಟ ವ್ಯಕ್ತಿ](https://etvbharatimages.akamaized.net/etvbharat/prod-images/768-512-3327084-thumbnail-3x2-pain.jpg)
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ನಂದಿಮೋರಿಯ ರೈಲ್ವೆ ಟ್ರ್ಯಾಕ್ ಬಳಿ ಘಟನೆ ನಡೆದಿದೆ. ನಗರದ ಮುತ್ಸಂದ್ರ ನಿವಾಸಿ ಮುನಿರಾಜು (40) ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.
ಕೂಲಿ ಕೆಲಸ ಮಾಡುವ ಮುನಿರಾಜುಗೆ ಹೊಟ್ಟೆಯಲ್ಲಿ ಗಡ್ಡೆಗಳಾಗಿದ್ದವು. ಈತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸ್ಕೊಂಡಿದ್ದನಂತೆ. ಶಸ್ತ್ರಚಿಕಿತ್ಸೆ ಬಳಿಕವೂ ಹೊಟ್ಟೆನೋವು ಕಡಿಮೆಯಾಗದ್ದಕ್ಕೆ ಮದ್ಯ ವ್ಯಸನಿಯಾಗಿದ್ದನಂತೆ. ಕುಡಿತದಿಂದ ರೋಗ ಮತ್ತಷ್ಟು ಉಲ್ಬಣಗೊಂಡು ಅತಿಯಾಗಿ ನೋವು ಕಾಡಲಾರಂಭಿಸಿದ್ದರಿಂದ ಮುನಿರಾಜು ನಿನ್ನೆ ರಾತ್ರಿ ರೈಲಿಗೆ ತಲೆಕೊಟ್ಟಿದ್ದಾನೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನಿಡಿ ಪರಿಶೀಲಿಸಿದ್ದಾರೆ.