ಕರ್ನಾಟಕ

karnataka

ETV Bharat / state

ವಿಜೃಂಭಣೆಯ ಸಪ್ತಮಾತೃಕ ಮಾರಿಯಮ್ಮ ಕರಗ ಮಹೋತ್ಸವ - undefined

ತಮಿಳುನಾಡು ಕಲಾವಿದರಿಂದ ತಯಾರಿಸಲಾದ ವಿವಿಧ ದೇವತೆಗಳ ವಿದ್ಯುತ್ ದೀಪಾಲಂಕೃತ ಬೃಹತ್ ಕಟೌಟ್‌ಗಳು ಕರಗದ ಸಂಭ್ರಮಕ್ಕೆ ಹಚ್ಚಿನ ಮೆರುಗು ನೀಡಿವೆ.

ಕರಗ ಮಹೋತ್ಸವ

By

Published : May 18, 2019, 9:00 PM IST

ದೊಡ್ಡಬಳ್ಳಾಪುರ : ನಗರದ ವನ್ನಿಗರಪೇಟೆಯಲ್ಲಿರುವ ಶ್ರೀಸಪ್ತಮಾತೃಕ ಮಾರಿಯಮ್ಮ ದೇವಾಲಯದಲ್ಲಿ ನಡೆಯಲಿರುವ ಕರಗ ಮಹೋತ್ಸವದ ಅಂಗವಾಗಿ ಹಸಿ ಕರಗ ಉತ್ಸವ ಸಂಭ್ರಮದಿಂದ ನೆರವೇರಿದೆ.

ಶ್ರೀ ಸಪ್ತಮಾತೃಕ ಮಾರಿಯಮ್ಮ ಕರಗ ಮಹೋತ್ಸವ

ಶನಿವಾರ ರಾತ್ರಿ ನಡೆಯುವ ಕರಗ ಮಹೋತ್ಸವ ಮುನ್ನ ಹಸಿ ಕರಗ ಉತ್ಸವ ನಡೆಯುವ ಆಚರಣೆ ಹಿಂದಿನಿಂದ ನಡೆದುಕೊಂಡು ಬಂದಿದೆ. ಕುಪ್ಪಂನ ಪೂಜಾರಿ ಮುನಿರತ್ನಂ ಬಾಲಾಜಿ ಹಸಿ ಕರಗವನ್ನು ಹೊತ್ತು ಕರಗದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದ್ದಾರೆ.

ಆಂಧ್ರ ಪ್ರದೇಶ ಕುಪ್ಪಂ ಪೂಜಾರಿ ಮುನಿರತ್ನಂ ಬಾಲಾಜಿ ಎರಡನೇ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ಕರಗ ಹೊರುತಿದ್ದಾರೆ. ವಂಶಪಾರಂಪರ್ಯವಾಗಿ ಕರಗ ಆಚರಣೆ ಮಾಡುತ್ತಾ ಬರುತ್ತಿರುವ ಕುಟುಂಬ ಕರಗ ನೃತ್ಯದಲ್ಲಿ ವಿಶೇಷ ಪರಿಣಿತಿ ಪಡೆದಿದೆ.

ನಗರದ ಗಗನಾರ್ಯಸ್ವಾಮಿ ಮಠದಿಂದ ಹೊರಟ ಉತ್ಸವವು ಹಳೇ ಬಸ್ ನಿಲ್ದಾಣ, ನೆಲದಾಂಜನೇಯಸ್ವಾಮಿ ದೇವಾಲಯ, ಏಳು ಸುತ್ತಿನ ಕೋಟೆ, ತೂಬಗೆರೆ ಪೇಟೆ, ವನ್ನಿಗರಪೇಟೆ ಮತ್ತಿತರೆಡೆ ಹಸಿ ಕರಗ ಹೊತ್ತ ಪೂಜಾರಿ ಮತ್ತು ಭಕ್ತರು ಉತ್ಸವದಲ್ಲಿ ಸಾಗಿದರು.

ಇಂದು ರಾತ್ರಿ ನಡೆಯಲಿರುವ ಶ್ರೀಸಪ್ತಮಾತೃಕ ಮಾರಿಯಮ್ಮ ಕರಗ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ದೇವಾಲಯವನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿದೆ. ನಗರದ ವಿವಿಧ ವೃತ್ತಗಳಲ್ಲಿ ತಮಿಳುನಾಡು ಕಲಾವಿದರಿಂದ ತಯಾರಿಸಲಾದ ವಿವಿಧ ದೇವತೆಗಳ ವಿದ್ಯುತ್ ದೀಪಾಲಂಕೃತ ಬೃಹತ್ ಕಟೌಟ್‌ಗಳು ಕರಗದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿವೆ.

For All Latest Updates

TAGGED:

ABOUT THE AUTHOR

...view details