ಕರ್ನಾಟಕ

karnataka

ETV Bharat / state

ಶಾಲೆಗೆ ಬರಲಾಗದ ವಿಶೇಷಚೇತನ ಮಕ್ಕಳು: ಪೋಷಕರಿಗೆ ತರಬೇತಿ ನೀಡಿ ಶಿಕ್ಷಣಕ್ಕೆ ಕ್ರಮ - ಬೆಂಗಳೂರು ಗ್ರಾಮಾಂತರ ವಿಶೇಷಚೇತನ ಮಕ್ಕಳ ಸುದ್ದಿ

ದೊಡ್ಡಬಳ್ಳಾಪುರ ನಗರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ವಿಕಲಚೇತನರ ಪುನರ್ ವಸತಿ ಕೇಂದ್ರದಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆ ಅನುಷ್ಠಾನದೊಂದಿಗೆ ವಿಶಿಷ್ಟ ಪ್ರಯತ್ನ ಮಾಡಲಾಗುತ್ತಿದೆ. ಬುದ್ದಿಮಾಂದ್ಯ  ಮಕ್ಕಳಿಗೆ ವಿಶೇಷಚೇತನರ ಶಾಲೆಗಳಲ್ಲಿ ದಿನನಿತ್ಯ ಜೀವನದ ಚಟುವಟಿಕೆಗಳ ಬಗ್ಗೆ ತರಬೇತಿ ನೀಡದಾಗುತ್ತದೆ. ಪೋಷಕರ ನೆರವಿಲ್ಲದೆ ತಮ್ಮ ಕೆಲಸ ತಾವೇ ಮಾಡಿಕೊಳ್ಳುವಂತೆ ಸ್ವಾವಲಂಬನೆ ಜೀವನ ಕಲಿಸಲಾಗುತ್ತದೆ.

special-children
ಶಾಲೆಗೆ ಬರಲಾಗದ ವಿಶೇಷಚೇತನ ಮಕ್ಕಳು: ಪೋಷಕರಿಗೆ ತರಬೇತಿ ನೀಡಿ ಶಿಕ್ಷಣಕ್ಕೆ ಕ್ರಮ

By

Published : Jun 25, 2021, 11:30 PM IST

ದೊಡ್ಡಬಳ್ಳಾಪುರ: ವಿಶೇಷಚೇತನ ಮಕ್ಕಳಲ್ಲಿ ಸ್ವಾವಲಂಬನೆ ಪಾಠವನ್ನು ಕಲಿಸುವ ಮೂಲಕ ಪೋಷಕರ ಅವಲಂಬನೆ ತಪ್ಪಿಸುವ ಕೆಲಸವನ್ನು ವಿಕಲಚೇತನರ ಶಾಲೆ ಮಾಡುತ್ತಿದೆ. ಆದರೆ ಲಾಕ್​ಡೌನ್ ಜಾರಿಯಾದ ಬಳಿಕ ಈ ಮಕ್ಕಳಿಗೆ ಶಾಲೆಗೆ ತೆರಳಲು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಶಿಷ್ಟ ಯೋಜನೆ ಕಾರ್ಯರೂಪಕ್ಕೆ ತಂದಿದ್ದು, ಬುದ್ದಿಮಾಂದ್ಯ ಮಕ್ಕಳ ಪೋಷಕರಿಗೆ ತರಬೇತಿ ನೀಡಿ ಅವರ ಮೂಲಕ ತಮ್ಮ ಮಕ್ಕಳಿಗೆ ಕಲಿಸುವ ಯೋಜನೆಯನ್ನ ಕಾರ್ಯರೂಪಕ್ಕೆ ತಂದಿದೆ.

ಶಾಲೆಗೆ ಬರಲಾಗದ ವಿಶೇಷಚೇತನ ಮಕ್ಕಳು: ಪೋಷಕರಿಗೆ ತರಬೇತಿ ನೀಡಿ ಶಿಕ್ಷಣಕ್ಕೆ ಕ್ರಮ

ದೊಡ್ಡಬಳ್ಳಾಪುರ ನಗರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ವಿಕಲಚೇತನರ ಪುನರ್ ವಸತಿ ಕೇಂದ್ರದಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆ ಅನುಷ್ಠಾನದೊಂದಿಗೆ ವಿಶಿಷ್ಟ ಪ್ರಯತ್ನ ಮಾಡಲಾಗುತ್ತಿದೆ. ಬುದ್ದಿಮಾಂದ್ಯ ಮಕ್ಕಳಿಗೆ ವಿಶೇಷಚೇತನರ ಶಾಲೆಗಳಲ್ಲಿ ದಿನನಿತ್ಯ ಜೀವನದ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಪೋಷಕರ ನೆರವಿಲ್ಲದೆ ತಮ್ಮ ಕೆಲಸ ತಾವೇ ಮಾಡಿಕೊಳ್ಳುವಂತೆ ಸ್ವಾವಲಂಬನೆ ಜೀವನ ಕಲಿಸಲಾಗುತ್ತದೆ.

ಈ ಕಾರ್ಯಕ್ಕೆ ಈಗಾಗಲೇ ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬಂದಿದ್ದು, ತರಬೇತಿ ಹೊಂದಿದ ಪೋಷಕರ ಮಕ್ಕಳಿಂದ ಉತ್ತಮ ಸ್ಪಂದನೆ ಲಭಿಸಿದೆ. ಇದೇ ಮಾದರಿಯ ಇತರೆ ಜಿಲ್ಲೆಗಳಲ್ಲಿ ವಿಸ್ತರಣೆಯಾಗುವ ಸಾಧ್ಯತೆ ಇದೆ.

ವಿಕಲಚೇತನ ಮಕ್ಕಳನ್ನು ಪೋಷಣೆ ಹಾಗೂ ತರಬೇತಿ ಕೇಂದ್ರಗಳಿಗೆ ಕರೆತರುವುದೇ ಒಂದು‌ ಸಾಹಸ. ಇದನ್ನು ತಪ್ಪಿಸಲು ಜಿಲ್ಲೆಯಲ್ಲಿ ಜಿಲ್ಲಾ ವಿಕಲಚೇತನ ಪುನರ್ ವಸತಿ ಕೇಂದ್ರದ ವತಿಯಿಂದ ಬುದ್ಧಿಮಾಂದ್ಯ ಮಕ್ಕಳ ತಾಯಂದಿರಿಗಾಗಿ ವಿಶೇಷವಾಗಿ ಆರು ತಿಂಗಳು ಉಚಿತ ವಿಶೇಷ ಶಿಕ್ಷಣದ ಕೋರ್ಸ್‌ ಪ್ರಾರಂಭಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪ್ರದೇಶದ 12 ಪೋಷಕರನ್ನು ಗುರುತಿಸಿ 5 ತಿಂಗಳ ಅವಧಿಯ ತರಬೇತಿ ಮುಗಿಸಲಾಗಿದೆ.

ಈ ತರಬೇತಿಯನ್ನು ನುರಿತ ಆರ್​ಸಿಐ ಮಾನ್ಯತೆ ಪಡೆದ ವಿಶಿಷ್ಟ ಶಿಕ್ಷಕರಿಂದ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಅವರ ಮಕ್ಕಳ ಅಭಿವೃದ್ಧಿಗೆ ಅವಶ್ಯಕವಾಗಿರುವ ಥೆರಪಿ, ಬೌದ್ದಿಕ, ಮಾನಸಿಕವಾಗಿ ಅವರ ಬೆಳವಣಿಗೆ ಸಹಾಯಕವಾಗುವ ವ್ಯಾಯಾಮ, ಬಣ್ಣಗಳ ಗುರುತಿಸುವಿಕೆ, ಔಷಧಿಗಳ ಬಗ್ಗೆ ತರಬೇತಿಯಲ್ಲಿ ಕಲಿಸಲಾಗುತ್ತದೆ.

ಜಿಲ್ಲಾ ಅಂಗವಿಕಲರ ಪುನರ್ ವಸತಿ ಕೇಂದ್ರದಲ್ಲಿ ಪ್ರತಿದಿನ 30-35 ಮಕ್ಕಳಿಗೆ ತರಬೇತಿ ನೀಡಲಾಗುತ್ತಿತ್ತು. ಆದರೆ ಕೊರೊನಾ‌ ಕಾರಣದಿಂದ ಮೆದುಳುವಾತ, ಡೌನ್ ಸಿಂಡ್ರೋಮ್, ಬೌದ್ಧಿಕ ಅಂಗವೈಕಲ್ಯ ಅಲ್ಲದೆ ಮಾತಿನ ತೊಂದರೆ ಹಾಗೂ ವರ್ತನೆಯ ತೊಂದರೆ ಇರುವ ಮಕ್ಕಳು ಶಾಲೆಗೆ ಬರಲು ಕಷ್ಟವಾಗಿತ್ತು. ಇದೀಗ ಗೂಗಲ್ ಮೀಟ್ ಮೂಲಕ ಮಕ್ಕಳ ಪೋಷಕರಿಗೆ ಹಾಗೂ ಮಕ್ಕಳಿಗೆ ತರಗತಿ ನಡೆಸಲಾಗುತ್ತಿದೆ.

ಇಂತಹ ಮಕ್ಕಳ ಮೆದುಳಿನ ಬೆಳವಣಿಗೆಯನ್ನು ಸುಧಾರಿಸುವ ಉತ್ತೇಜನ ಚಟುವಟಿಕೆ ಹಾಗೂ ಮನೆ ಆಧಾರಿತ ಥೆರಪಿ, ಬೌದ್ಧಿಕ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಲು ನೆರವಾಗಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಚಟುವಟಿಕೆಗಳನ್ನು ಆನ್​ಲೈನ್ ಮೂಲಕ ಅವರಿಗೆ ಒದಗಿಸಲಾಗುತ್ತಿದೆ. ಮಗುವಿಗೆ ಅವಶ್ಯಕತೆ ಇರುವ ರೋಲೇಟರ್, ಗಾಲಿಕುರ್ಚಿ, ಸಿಪಿ ಕುರ್ಚಿ, ಶ್ರವಣ ಸಾಧನ, ವಾಕರ್ ಹಾಗೂ ಇನ್ನಿತರ ಸಾಧನ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.

ABOUT THE AUTHOR

...view details