ದೊಡ್ಡಬಳ್ಳಾಪುರ:ಲಾಕ್ಡೌನ್ ನಡುವೆ ಮನೆಯಿಂದ ಹೊರಬಂದು ಅಪ್ರಾಪ್ತ ಮಗನಿಗೆ ಡ್ರೈವಿಂಗ್ ಹೇಳಿಕೊಡುತ್ತಿದ್ದ ತಂದೆ-ತಾಯಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಲಾಕ್ಡೌನ್ ಟೈಮಲ್ಲಿ ಮಗನಿಗೆ ಡ್ರೈವಿಂಗ್ ಹೇಳಿಕೊಡುತ್ತಿದ್ದ ತಂದೆ-ತಾಯಿಗೆ ಚನ್ನಣ್ಣನವರ್ ಕ್ಲಾಸ್ - Doddaballapura latest news
ಅಪ್ರಾಪ್ತ ಮಗನಿಗೆ ಡ್ರೈವಿಂಗ್ ಹೇಳಿ ಕೊಡುತ್ತಿದ್ದ ತಂದೆ-ತಾಯಿಗೆ ಎಸ್ಪಿ ರವಿ ಡಿ. ಚನ್ನಣ್ಣನವರ್ ಕ್ಲಾಸ್ ಬುದ್ದಿ ಹೇಳಿರುವ ಘಟನೆ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.
ಎಸ್ಪಿ ರವಿ ಡಿ ಚನ್ನಣ್ಣನವರ್
ದೊಡ್ಡಬಳ್ಳಾಪುರ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಪೋಷಕರು ಅಪ್ರಾಪ್ತ ಮಗನಿಗೆ ಡ್ರೈವಿಂಗ್ ಹೇಳಿಕೊಡುತ್ತಿದ್ದನ್ನು ಗಮನಿಸಿದ ಎಸ್ಪಿ ರವಿ ಡಿ ಚನ್ನಣ್ಣನವರ್ ನಡು ರಸ್ತೆಯಲ್ಲಿ ಕಾರು ತಡೆದ ತಂದೆ-ತಾಯಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿರುವ ಬದಲು ಹೊರಗೆ ಬಂದದ್ದು ತಪ್ಪು, ಅದರಲ್ಲೂ ಅಪ್ರಾಪ್ತ ಮಗನಿಗೆ ಕಾರ್ ಡ್ರೈವಿಂಗ್ ಹೇಳಿ ಕೊಡುತ್ತಿರುವುದು ಕಾನೂನುಬಾಹಿರವೆಂದು ಅವರಿಗೆ ಬುದ್ದಿ ಹೇಳಿ ಪ್ರಕರಣ ದಾಖಲಿಸಿ ಕಾರನ್ನ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಿದರು.
Last Updated : Apr 6, 2020, 11:36 AM IST