ಬೆಂಗಳೂರು:ಈಗಾಗಲೇ ರಾಜ್ಯಾದ್ಯಂತ ನಿಷೇಧಗೊಂಡಿರುವ ಆಫ್ರಿಕನ್ ಕ್ಯಾಟ್ ಫಿಶ್ ಅನ್ನು ಅಕ್ರಮವಾಗಿ ಸಾಕಾಣಿಕೆ ಮಾಡುತ್ತಿದ್ದ ಅಡ್ಡೆ ಮೇಲೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ನೇತೃತ್ವದ ತಂಡ ದಾಳಿ ನಡೆಸಿದೆ.
ಅಕ್ರಮ ಕ್ಯಾಟ್ ಫಿಶ್ ಸಾಕಾಣೆ ಅಡ್ಡೆ ಮೇಲೆ ಎಸ್ಪಿ ರವಿ ಚನ್ನಣ್ಣನವರ್ ದಾಳಿ - ರವಿ ಡಿ. ಚನ್ನಣ್ಣನವರ್
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನಲ್ಲಿ ಆಫ್ರಿಕನ್ ಕ್ಯಾಟ್ ಫಿಶ್ ಅನ್ನು ಅಕ್ರಮವಾಗಿ ಸಾಕಾಣಿಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಜೆಸಿಬಿಗಳ ಮುಖಾಂತರ ಆಫ್ರಿಕನ್ ಸಾಕಾಣೆ ಹೊಂಡಗಳನ್ನು ತೆರವುಗೊಳಿಸಿದರು.
SP Ravi channanvar
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಬೈಲನರಸಾಪುರ, ಬಂಡಹಳ್ಳಿ, ಹೊಸಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ 25 ಕ್ಕೂ ಹೆಚ್ಚು ಕಡೆ ಅಕ್ರಮವಾಗಿ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ ಸುಮಾರು 30ಕ್ಕೂ ಹೆಚ್ಚು ಮೀನು ಸಾಕಾಣಿಕೆ ಹೊಂಡವನ್ನು ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ತಾಲೂಕು ಆಡಳಿತ ಹಾಗೂ ಜಿಲ್ಲಾ ಮೀನುಗಾರಿಕೆ ಸೇರಿದಂತೆ ಪಂಚಾಯತಿ ಅಧಿಕಾರಿಗಳ ತಂಡವೂ ಭಾಗವಹಿಸಿತ್ತು.
ನಿಷೇಧ ಗೊಂಡಿದ್ದರು ಸಾಕಾಣಿಕೆ ಮುಂದುವರೆಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಈ ವೇಳೆ ತಿಳಿಸಿದರು.