ಕರ್ನಾಟಕ

karnataka

ETV Bharat / state

ಕಪ್ಪು ಪಲ್ಸರ್‌ ಬೈಕ್‌ನಲ್ಲಿ ಬಂದು ಸರಗಳ್ಳತನ: ಎರಡೇ ದಿನ 1 ಕೆ.ಜಿ ಚಿನ್ನಾಭರಣ ದೋಚಿದ ಖದೀಮರು - ಸರಗಳ್ಳತನ

ಬೆಂಗಳೂರಿನ ಹೊರಭಾಗದಲ್ಲಿ ನಿನ್ನೆ ಒಂದೇ ದಿನ 6 ಕಡೆ ಸರಗಳ್ಳತನ ಪ್ರಕರಣಗಳು ನಡೆದಿವೆ. ಎರಡು ದಿನಗಳಲ್ಲಿ ಅಂದಾಜು 1 ಕೆ.ಜಿ ಚಿನ್ನಾಭರಣ ಎಗರಿಸಿರುವ ಕಳ್ಳರು ಎಸ್ಕೇಪ್ ಆಗಿದ್ದಾರೆ.

Bangalore
ಬೆಂಗಳೂರು

By

Published : Jul 1, 2021, 7:55 PM IST

ಹೊಸಕೋಟೆ/ಬೆಂಗಳೂರು: ಲಾಕ್​ಡೌನ್ ಸಡಿಲಿಕೆಯಾಗುತ್ತಿದ್ದಂತೆ ನಗರದಲ್ಲಿ ಸರಗಳ್ಳರು ಆ್ಯಕ್ಟಿವ್​​ ಆಗಿದ್ದಾರೆ. ನಗರದ ಹೊರವಲಯದಲ್ಲಿ ಕಪ್ಪು ಪಲ್ಸರ್ ಬೈಕ್‌ಗಳಲ್ಲಿ ಬಂದು ಸರಗಳ್ಳತನ ಮಾಡುವವರ ಹಾವಳಿ ಹೆಚ್ಚಾಗಿದೆ.

ನಿನ್ನೆ ಒಂದೇ ದಿನ 6 ಕಡೆ ಸರಗಳ್ಳತನ ನಡೆದಿದೆ. ಅಲ್ಲದೇ ಕಳೆದೆರಡು ದಿನಗಳಲ್ಲಿ 9 ಕಡೆ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. ಬೆಂ.ಗ್ರಾ ಜಿಲ್ಲಾ ವ್ಯಾಪ್ತಿಯ ಸರ್ಜಾಪುರ, ಅನುಗೊಂಡನಹಳ್ಳಿ, ಸೂಲಿಬೆಲೆ, ತಿರುಮಲಶೆಟ್ಟಿಹಳ್ಳಿ, ಹೊಸಕೋಟೆ, ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ನಡೆದಿವೆ.

ಭವಾರಿಯಾ ಗ್ಯಾಂಗ್ ಈ ಕೃತ್ಯ ನಡೆಸಿದೆ ಎಂದು ಶಂಕಿಸಲಾಗಿದೆ. ಎರಡು ದಿನದಲ್ಲಿ ಸುಮಾರು ಒಂದು ಕೆ.ಜಿಯಷ್ಟು ಚಿನ್ನಾಭರಣ ಎಗರಿಸಿರುವ ಖದೀಮರಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸರು ತಲಾಶ್ ನಡೆಸಿದ್ದಾರೆ. ಜತೆಗೆ ಚೆಕ್‌ಪೋಸ್ಟ್‌ಗಳಲ್ಲಿಯೂ ಅಲರ್ಟ್ ಆಗಿರುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಮಹದೇವಪುರ ಮತ್ತು ನೆಲಮಂಗಲದಲ್ಲಿ ಮುಖ್ಯಮಂತ್ರಿ ನಿನ್ನೆ ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಆ ವೇಳೆ ಪೊಲೀಸರು ಸಿಎಂ ಬಂದೋಬಸ್ತ್‌ನಲ್ಲಿ ಮಗ್ನರಾಗಿದ್ದರು. ಈ ನಡುವೆ ಕೈಚಳಕ ತೋರಿಸಿದ ಸರಗಳ್ಳರು ಬೆಂಗಳೂರು ಸುತ್ತಮುತ್ತಲಿನ ಹೊರಭಾಗದಲ್ಲಿ ಕೃತ್ಯ ಎಸಗಿ ಪರಾರಿಯಾಗಿದ್ದಾರೆ.

ಕಪ್ಪು ಬಣ್ಣದ ಪಲ್ಸರ್​​ ಬೈಕ್​​ಗಳಲ್ಲಿ ಬಂದಿರುವ ಒಂದೇ ಗ್ಯಾಂಗ್‌ನಿಂದ ಎಲ್ಲೆಡೆ ಸರಗಳ್ಳತನವಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಂಚಿಕೊಂಡಿದ್ದು ಸರಗಳ್ಳರಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details