ಹೊಸಕೋಟೆ: ಚಾಕು ಮತ್ತು ದೊಣ್ಣೆ ತೋರಿಸಿ ಮತ ಕೇಳುತ್ತಿದ್ದ ಒಂದು ಕಾಲವಿತ್ತು. ಆದ್ರೆ ಇದೀಗ ಕೈ ಕಾಲು ಮುಗಿದು ಮತ ಕೇಳುವ ಪರಿಸ್ಥಿತಿ ನಮ್ಮ ವಿರೋಧಿಗಳಿಗೆ ಬಂದಿದೆ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರೋಕ್ಷವಾಗಿ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೆಸ್ ಪಕ್ಷದವರಿಗೆ ಟಾಂಗ್ ನೀಡಿದ್ದಾರೆ.
ನಮ್ಮ ವಿರೋಧಿಗಳಿಗೆ ಕೈ ಕಾಲು ಹಿಡಿದು ವೋಟ್ ಕೇಳುವ ಪರಿಸ್ಥಿತಿ ಬಂದಿದೆ: ಎಂಟಿಬಿ - ಬೆನ್ನಿಗಾನಹಳ್ಳಿ ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ಯಾರು ಹೋಗುವಂತಿರಲಿಲ್ಲ
ರಾಜ್ಯದಲ್ಲಿನ ಉಪಸಮರ ದಿನದಿಂದ ದಿನಕ್ಕೆ ಮತ್ತಷ್ಟು ರಂಗು ಪಡೆದುಕೊಳ್ಳುತ್ತಿದ್ದು, ಎದುರಾಳಿಗಳ ನಡುವಿನ ಆರೋಪ-ಪ್ರತ್ಯಾರೋಪ ಸರ್ವೇ ಸಾಮಾನ್ಯವಾಗಿವೆ.
ನಮ್ಮ ವಿರೋಧಿಗಳಿಗೆ ಕೈ ಕಾಲು ಹಿಡಿದು ವೋಟ್ ಕೇಳುವ ಪರಿಸ್ಥಿತಿ ಬಂದಿದೆ:ಎಂಟಿಬಿ ನಾಗರಾಜ್
ಸೂಲಿಬೆಲೆ ಸೇರಿದಂತೆ ಹಲವು ಹಳ್ಳಿಗಳಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ ಎಂಟಿಬಿ, ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಹೊಸಕೋಟೆಗೆ ಬಂದಿರಲಿಲ್ಲ, ಬೆನ್ನಿಗಾನಹಳ್ಳಿ ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ಯಾರು ಹೋಗುವಂತಿರಲಿಲ್ಲ. ಆದರೆ 2004ರ ನಂತರ ನಾನು ಬಂದ ಮೇಲೆ ಜನರು ನಿರ್ಭೀತಿಯಿಂದ ಇದ್ದಾರೆ ಎಂದು ಬಚ್ಚೇಗೌಡರ ಮೇಲೆ ಆರೋಪ ಮಾಡಿದ್ದಾರೆ.