ಕರ್ನಾಟಕ

karnataka

ETV Bharat / state

ಎಸ್​​ಐಟಿಯಿಂದ 5ನೇ ಆರೋಪಿ ವಿಚಾರಣೆ.. ಮಾಜಿ ಪತ್ರಕರ್ತನ ಸುದ್ದಿ ತಿಳಿದು ಅಚ್ಚರಿಗೊಳಗಾದ ಗ್ರಾಮಸ್ಥರು - ಸಿನೇಶ್ ಕಲ್ಲಹಳ್ಳಿ

ಹಣಕ್ಕಾಗಿ ಇಂತಹ ಕೆಲಸ ಮಾಡುವ ಹುಡುಗನಲ್ಲ, ಹಣ ತಗೊಂಡಿದ್ದರೆ ಲಕ್ಷ್ಮಿಪತಿ ಇಂತಹ ಮನೆಯಲ್ಲಿ ವಾಸ ಮಾಡುತ್ತಿರಲಿಲ್ಲ. ಮನೆಯಲ್ಲಿ ಟಿವಿ ಸಹ ಇಲ್ಲ, 3 ತಿಂಗಳ ಹಿಂದೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಊರಿಗೆ ಬಂದು ಹೋಗಿದ್ದ..

sit-enquiry-aa-former-journalist-in-link-with-jarkiholi-cd-case
ಎಸ್​​ಐಟಿಯಿಂದ 5ನೇ ಆರೋಪಿ ವಿಚಾರಣೆ

By

Published : Mar 17, 2021, 3:34 PM IST

ದೊಡ್ಡಬಳ್ಳಾಪುರ(ಬೆಂ.ಗ್ರಾ) :ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಎಸ್​​ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಎಸ್​​​ಐಟಿ ವಶದಲ್ಲಿರುವ 5ನೇ ಆರೋಪಿ ಲಕ್ಷ್ಮಿಪತಿ ದೊಡ್ಡಬಳ್ಳಾಪುರ ತಾಲೂಕಿನ ಲಘುಮೇನಹಳ್ಳಿಯ ನಿವಾಸಿಯಾಗಿದ್ದಾನೆ. ಮಾಧ್ಯಮಗಳಲ್ಲಿ ಲಕ್ಷ್ಮಿಪತಿ ಹೆಸರು ಬರುತ್ತಿರುವುದು ಗ್ರಾಮಸ್ಥರಿಗೆ ಇದೀಗ ಅಚ್ಚರಿ ಮತ್ತು ಗೊಂದಲವನ್ನುಂಟು ಮಾಡಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಮತ್ತು ಹಣಕ್ಕೆ ಬೇಡಿಕೆ ಇಟ್ಟ ಆರೋಪದಡಿ ಮಾಜಿ ಪತ್ರಕರ್ತನನ್ನ ವಶಕ್ಕೆ ಪಡೆದಿದೆ.

ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿಗೆ ಸಿಡಿ ಹಸ್ತಾಂತರ ಮಾಡಿದ ಆರೋಪದ ಹಿನ್ನೆಲೆ ಮಾಜಿ ಪತ್ರಕರ್ತ ಲಕ್ಷ್ಮಿಪತಿಯನ್ನು ಎಸ್​​ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೊಳಪಡಿಸುತ್ತಿದ್ದಾರೆ.

ಮಾಜಿ ಪತ್ರಕರ್ತನ ಸುದ್ದಿ ತಿಳಿದು ಅಚ್ಚರಿಗೊಳಗಾದ ಗ್ರಾಮಸ್ಥರು..

ಆರೋಪಿ ಲಕ್ಷ್ಮಿಪತಿ ದೊಡ್ಡಬಳ್ಳಾಪುರ ತಾಲೂಕಿನ ಲಘುಮೇನಹಳ್ಳಿಯ ನಿವಾಸಿಯಾಗಿದ್ದಾನೆ. ನಿನ್ನೆಯಿಂದ ಮಾಧ್ಯಮಗಳಲ್ಲಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಲಕ್ಷ್ಮಿಪತಿಯ ಹೆಸರು ಕೇಳಿ ಬರುತ್ತಿರುವುದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ. ಸಣ್ಣ ಸಿಮೆಂಟ್ ಸೀಟಿನ ಮನೆಯಲ್ಲಿ ಲಕ್ಷ್ಮಿಪತಿಯ ತಂದೆ-ತಾಯಿ ವಾಸವಾಗಿದ್ದಾರೆ. ಲಕ್ಷ್ಮಿಪತಿ ಬೆಂಗಳೂರಿನ ವಿಜಯನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾನೆ.

ಹಣಕ್ಕಾಗಿ ಇಂತಹ ಕೆಲಸ ಮಾಡುವ ಹುಡುಗನಲ್ಲ, ಹಣ ತಗೊಂಡಿದ್ದರೆ ಲಕ್ಷ್ಮಿಪತಿ ಇಂತಹ ಮನೆಯಲ್ಲಿ ವಾಸ ಮಾಡುತ್ತಿರಲಿಲ್ಲ. ಮನೆಯಲ್ಲಿ ಟಿವಿ ಸಹ ಇಲ್ಲ, 3 ತಿಂಗಳ ಹಿಂದೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಊರಿಗೆ ಬಂದು ಹೋಗಿದ್ದ ಎಂದು ಗ್ರಾಮಸ್ಥರು ಹೇಳುತ್ತಾರೆ.

ಇದನ್ನೂ ಓದಿ:ಮಂಡ್ಯದಲ್ಲಿ ಜೆಡಿಎಸ್​-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ.. 15 ಜನರ ಮೇಲೆ ಪ್ರಕರಣ

ABOUT THE AUTHOR

...view details