ಕರ್ನಾಟಕ

karnataka

ETV Bharat / state

ಘಾಟಿ ಸುಬ್ರಹ್ಮಣ್ಯ ಹುಂಡಿ ಎಣಿಕೆ: 93ಲಕ್ಷ ರೂಪಾಯಿ ಸಂಗ್ರಹ - ಘಾಟಿ ಸುಬ್ರಹ್ಮಣ್ಯದಲ್ಲಿ ಹುಂಡಿ ಹಣ ಎಣಿಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಹುಂಡಿ ಎಣಿಕೆ ಆಗಿದೆ. ಈ ಬಾರಿ ಒಟ್ಟಾರೆ 93,08,043 ರೂಪಾಯಿ ಹಣ ಸಂಗ್ರಹವಾಗಿದೆ.

ಘಾಟಿ ಸುಬ್ರಹ್ಮಣ್ಯ ಹುಂಡಿ ಹಣ ಎಣಿಕೆ
ಘಾಟಿ ಸುಬ್ರಹ್ಮಣ್ಯ ಹುಂಡಿ ಹಣ ಎಣಿಕೆ

By

Published : Sep 12, 2022, 6:23 PM IST

Updated : Sep 12, 2022, 7:55 PM IST

ದೊಡ್ಡಬಳ್ಳಾಪುರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸುಬ್ರಹ್ಮಣ್ಯ ದೇವಸ್ಥಾನದ ಭಕ್ತರ ಹುಂಡಿ ಎಣಿಕೆ ಮಾಡಲಾಗಿದೆ. ಒಟ್ಟು 93,08,043 ರೂಪಾಯಿ ಹಣ ಸಂಗ್ರಹವಾಗಿದೆ.

ನಾಗರಾಧನೆಯ ಕ್ಷೇತ್ರವಾಗಿರುವ ಘಾಟಿ ಸುಬ್ರಹ್ಮಣ್ಯಕ್ಕೆ ಸರ್ಪ ದೋಷ ನಿವಾರಣೆಗಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ದೇವರಿಗೆ ಕಾಣಿಕೆ ರೂಪದಲ್ಲಿ ಹುಂಡಿಗೆ ಹಣ ಹಾಕುತ್ತಾರೆ. ಸೆಪ್ಟೆಂಬರ್ 5 ರಂದು ಹುಂಡಿ ಹಣ ಎಣಿಕೆ ಮಾಡಿದಾಗ 69,04,308 ರೂಪಾಯಿ ಸಿಕ್ಕಿತ್ತು. ಹುಂಡಿ ಎಣಿಕೆ ಸಮಯದಲ್ಲಿ ಮಳೆ ಬಂದ ಹಿನ್ನೆಲೆ ಎರಡು ಹುಂಡಿಗಳ ಎಣಿಕೆ ಕಾರ್ಯ ಸ್ಥಗಿತಗೊಳಿಸಲಾಗಿತ್ತು.

ಘಾಟಿ ಸುಬ್ರಹ್ಮಣ್ಯ ಹುಂಡಿ ಎಣಿಕೆ

ಉಳಿದ ಹುಂಡಿಗಳ ಎಣಿಕೆಯನ್ನು ಸೋಮವಾರ ಮಾಡಲಾಗಿದ್ದು, 24,03,735 ರೂಪಾಯಿ ಸಂಗ್ರಹವಾಗಿದೆ. ಒಟ್ಟಾರೆ 93,08,043 ರೂಪಾಯಿ ಸಂಗ್ರಹವಾದಂತಾಗಿದೆ. ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಜೆ.ಜೆ. ಹೇಮಾವತಿ, ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ನಾಗರಾಜ್ ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ಮಾಡಲಾಯಿತು.

ಇದನ್ನೂ ಓದಿ:ಮಂತ್ರಾಲಯ ಮಠ ಕಾಣಿಕೆ ಹುಂಡಿ ಎಣಿಕೆ.. 2.78 ಕೋಟಿ ರೂ. ಹಣ ಸಂಗ್ರಹ

Last Updated : Sep 12, 2022, 7:55 PM IST

ABOUT THE AUTHOR

...view details