ಬೆಂಗಳೂರು :ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಮೊದಲ ಶನಿವಾರವನ್ನು ಜಿಲ್ಲೆಯಾದ್ಯಂತ ಆಚರಣೆ ಮಾಡಲಾಗಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ಅನ್ನ ದಾಸೋಹವನ್ನು ನೆರವೇರಿಸಲಾಯಿತು.
ಜಿಲ್ಲೆಯಾದ್ಯಂತ ಸಂಭ್ರಮದ ಶ್ರಾವಣ ಶನಿವಾರ ಆಚರಣೆ - Hindu festival
ಶ್ರಾವಣ ಶನಿವಾರವಾದ ಇಂದು ನಗರದಲ್ಲಿರುವ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ಅನ್ನ ದಾಸೋಹವನ್ನು ನೆರವೇರಿಸಲಾಯಿತು.
![ಜಿಲ್ಲೆಯಾದ್ಯಂತ ಸಂಭ್ರಮದ ಶ್ರಾವಣ ಶನಿವಾರ ಆಚರಣೆ](https://etvbharatimages.akamaized.net/etvbharat/prod-images/768-512-4031197-thumbnail-3x2-raichr.jpg)
bangalore ,ಬೆಂಗಳೂರು
ಜಿಲ್ಲೆಯಾದ್ಯಂತ ಸಂಭ್ರಮದ ಶ್ರಾವಣ ಶನಿವಾರ ಆಚರಣೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಗ್ಗಲಹಳ್ಳಿ ಶನಿ ಮಹಾತ್ಮ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ, ಶಿವನ ದೇವಾಲಯ, ಗಂಗಮ್ಮ ದೇವಾಲಯ, ಕಾಟೇರಮ್ಮ ದೇವಾಲಯ, ಗಣಪತಿ ದೇವಾಲಯ ಸೇರಿ ವಿವಿಧ ದೇವಾಲಯಗಳಲ್ಲಿಶ್ರಾವಣ ಶನಿವಾರವಾದ ಇಂದು ವಿಶೇಷ ಪೂಜಾ ಕಾರ್ಯಗಳನ್ನು ನಡೆಸಲಾಯಿತು.
ಬೆಳಗ್ಗೆಯಿಂದಲೇ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಹೂವು, ಹಣ್ಣು ಸಮರ್ಪಿಸಿ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನದ ಮುಂದೆ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು ವಿಶೇಷವಾಗಿತ್ತು.