ನೆಲಮಂಗಲ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಪ್ರಸಿದ್ಧ ಚಾರಣಿಗರ ಸ್ವರ್ಗ, ದಕ್ಷಿಣಕಾಶಿ ಶ್ರೀ ಕ್ಷೇತ್ರ ಶಿವಗಂಗೆಯ ಶ್ರೀಗಂಗಾಧರೇಶ್ವರ ಸ್ವಾಮಿ ಮತ್ತು ಹೊನ್ನಾದೇವಿ ದೇವಾಲಯಗಳ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, 4 ಲಕ್ಷದ 77 ಸಾವಿರದ 750 ರೂ. ಹಣ ಸಂಗ್ರಹವಾಗಿದೆ.
ಭಕ್ತರು ಕಾಣಿಕೆ ರೂಪದಲ್ಲಿ ಹುಂಡಿಗೆ ಹಾಕಿದ ಹಣ ಎಣಿಕೆ ಮಾಡಲಾಗುತ್ತೆ. ಅದರಂತೆ ಮುಜರಾಯಿ ಇಲಾಖೆಯ ತಹಶೀಲ್ದಾರ್, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಅರ್ಚಕರ ಸಮಕ್ಷಮದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.