ಹೋಸಕೋಟೆ: ಬೆಂಗಳೂರು ಗ್ರಾಮಾಂತರ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ಎಂಟಿಬಿಗೆ ಬಿಜೆಪಿ ಟಿಕೆಟ್ ನೀಡಲು ನಿರ್ಧರಿಸಿದ ಬೆನ್ನೆಲ್ಲೇ ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿ ಶರತ್ ಬಚ್ಚೇಗೌಡರನ್ನ ಮನವೊಲಿಸಲು ಸಿಎಂ ಯಡಿಯೂರಪ್ಪ ಹರಸಹಾಸ ಮಾಡಿದ್ರು. ಆದ್ರೆ ಇದಕ್ಕೊಪ್ಪದ ಶರತ್ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ ನಂತರ ಶರತ್ರನ್ನ ಸಮಾಧಾನ ಮಾಡಲು ಗೃಹ ಮಂಡಳಿ ಅಧ್ಯಕ್ಷರಾಗಿ ನೇಮಿಸಿ ಸಿಎಂ ಆದೇಶಿಸಿದ್ದಾರೆ.
ರಾಜ್ಯ ಉಪ ಚುನಾವಣೆ ಘೋಷಣೆಯಾದ ನಂತರ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯ ಸಿಎಂಗೆ ತಲೆನೋವಾಗಿದೆ. ಆದ್ರೆ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಂಡಾಯವೆದ್ದಿದ್ದ ಟಿಕೆಟ್ ಆಕಾಂಕ್ಷಿಗಳಿಗೆ ಸಿಎಂ ಬಿಎಸ್ವೈ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಇಂದು ಆದೇಶ ಹೊರಡಿಸಿದ್ದಾರೆ.
ಗೃಹ ಮಂಡಳಿ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಶರತ್ ಬಚ್ಚೇಗೌಡ ಆದ್ರೆ ಇದಕ್ಕೊಪ್ಪದ ಶರತ್ ಬಚ್ಚೇಗೌಡ ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನ ತಿರಸ್ಕಾರ ಮಾಡಿದ್ದಾರೆ. ಹೊಸಕೋಟೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಶರತ್ ಬಚ್ಚೇಗೌಡ, ಸಿಎಂ ಮೇಲೆ ನನಗೆ ಅಪಾರ ಗೌರವವಿದೆ. ಗೃಹ ಮಂಡಳಿಯಾಗಲಿ ಯಾವುದೇ ನಿಗಮ ಮಂಡಳಿಯಾಗಲಿ ನನಗೆ ಬೇಡ ಅಂತಾ ತಿರಸ್ಕಾರ ಮಾಡಿದ್ದಾರೆ. ಜತೆಗೆ ಸದ್ಯದ ಪರಿಸ್ಥಿತಿಯಲ್ಲಿ ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಹಿನ್ನೆಲೆ ಉನ್ನತ ಜವಾಬ್ದಾರಿ ಬೇಡ ಎಂದು ಟಿಕೆಟ್ ಸಿಗದೇ ಇದ್ರು ಸ್ವಾಭಿಮಾನಿಯಾಗಿ ಪಕ್ಷೇತರನಾಗಿ ಕಣಕ್ಕೆ ಇಳಿಯೋದಾಗಿ ಸ್ಪಷ್ಟಪಡಿಸಿದ್ದಾರೆ. ಇನ್ನು ಅನರ್ಹ ಶಾಸಕರ ಪ್ರಕರಣ ಕೋರ್ಟ್ನಲ್ಲಿದ್ದು, ತೀರ್ಪಿನ ಮೇಲೆ ಟಿಕೆಟ್ ನಿರ್ಧಾರವಾಗಲಿದೆ ಎಂದರು.
ಒಂದು ವೇಳೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿಯುವುದು ಗ್ಯಾರಂಟಿ. ಅದರಲ್ಲಿ ಅನುಮಾನವೇ ಬೇಡ ಅಂತಾ ಶರತ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ರು. ಇನ್ನು ಶರತ್ ಬಚ್ಚೇಗೌಡರ ಈ ಹೇಳಿಕೆ ಸಿಎಂಗೆ ತಲೆನೋವಾಗಿ ಪರಿಣಮಿಸಿದ್ದು, ಹೊಸಕೋಟೆ ಉಪ ಕಣ ಮುಂದೆ ಸಾಕಷ್ಟು ತಿರುವು ಪಡೆದುಕೊಳ್ಳಲಿದೆ.