ಕರ್ನಾಟಕ

karnataka

ETV Bharat / state

ಶರತ್​ ಬಚ್ಚೇಗೌಡ ರಾಷ್ಟ್ರೀಯ ಪಕ್ಷ ಸೇರುವುದು ಬಹುತೇಕ ಖಚಿತ - Hosakote news

ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಶರತ್​ ಬಚ್ಚೇಗೌಡ ಇದೀಗ ರಾಷ್ಟ್ರೀಯ ಪಕ್ಷಕ್ಕೆ ಸೇರೋದು ಬಹುತೇಕ ಖಚಿತವಾಗಿದೆ. ಸ್ವತಃ ಬಚ್ಚೇಗೌಡರೇ ಈ ಕುರಿತು ಮಾಹಿತಿ ಹೊರ ಹಾಕಿದ್ದಾರೆ.

Sharath Bachegowda
ಶರತ್​ ಬಚ್ಚೇಗೌಡ

By

Published : Oct 22, 2020, 3:48 PM IST

ಹೊಸಕೋಟೆ(ಬೆಂ.ಗ್ರಾಮಾಂತರ): ಪಕ್ಷೇತರ ಅಭ್ಯರ್ಥಿಯಾಗಿ ಉಳಿಯೋದು ಕಷ್ಟ, ರಾಷ್ಟ್ರೀಯ ಪಕ್ಷಕ್ಕೆ ಸೇರೋದು ಸತ್ಯ ಎಂದು ಶರತ್ ಬಚ್ಚೇಗೌಡ ಹೇಳಿದ್ದರು. ಎಂಟಿಬಿ ನಾಗರಾಜ್​ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದ ಬೈ ಎಲೆಕ್ಷನ್​ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಬಚ್ಚೇಗೌಡ ಇದೀಗ ರಾಷ್ಟ್ರೀಯ ಪಕ್ಷ ಸೇರಲು ಸಜ್ಜಾಗಿದ್ದಾರೆ.

ರಾಷ್ಟ್ರೀಯ ಪಕ್ಷ ಸೇರುವುದರ ಮಾಹಿತಿ ನೀಡಿದ ಶರತ್​ ಬಚ್ಚೇಗೌಡ

ರಾಷ್ಟ್ರೀಯ ಪಕ್ಷ ಸೇರುವುದರಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ತಾಲೂಕಿನ ಅಭಿವೃದ್ಧಿ ಮತ್ತು ಕಾರ್ಯಕರ್ತರ ಹಿತ ದೃಷ್ಟಿಯಿಂದ ನಾನು ಏನೇ ತೀರ್ಮಾನ ತೆಗೆದುಕೊಂಡರೂ ಒಳಿತಿಗೆ ಆಗಿರುತ್ತದೆ. ಶಾಶ್ವತವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಇರುವುದು ಕಷ್ಟ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷ ಸೇರುವುದು ನೂರಕ್ಕೆ ನೂರು ಸತ್ಯ ಎಂದು ಹೊಸಕೋಟೆ ತಾಲೂಕು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಹೊಸಕೋಟೆ ಪಟ್ಟಣದ ಗೌತಮ್ ಕಾಲೋನಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೋಷಿಮಾ ಪಂಪ್ ಪ್ರೈವೇಟ್​​ ಕಂಪನಿಯಿಂದ 25 ಲಕ್ಷ ರೂ. ವೆಚ್ಚದ ಶಾಲೆ ಮತ್ತು ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇಲ್ಲಿಯವರೆಗೂ ನನಗೆ ಯಾವುದೇ ಪಕ್ಷಗಳಿಂದ ಅಧಿಕೃತ ಆಹ್ವಾನ ಬಂದಿಲ್ಲ. ಹಾಗೆಯೇ ಮುಂದಿನ ದಿನಗಳಲ್ಲಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರುತ್ತಿದ್ದು, ಮಾತುಕತೆ ನಡೆಯುತ್ತಿರುವುದು ಸತ್ಯ. ತಾಲೂಕಿನ ಅಭಿವೃದ್ಧಿಯೇ ಮುಖ್ಯವಾಗಿದೆ. ಹಾಗಾಗಿ ಇದೇ 25 ರಂದು ಕಾಂಗ್ರೆಸ್ ಸೇರ್ಪಡೆ ಅನ್ನುವ ವಿಚಾರ ಸತ್ಯಕ್ಕೆ ದೂರವಾಗಿದೆ. ನಾನು ನಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಎಂದರು.

ಕಾಂಗ್ರೆಸ್ ಪಕ್ಷವು ಈಗಾಗಲೇ ತಾಲೂಕಿನಲ್ಲಿ ಹೋಬಳಿಗಳ ಮಟ್ಟದ ಸಭೆಗಳನ್ನು ನಡೆಸುತ್ತಿದ್ದು, ಅಲ್ಲಿಯೂ ಸಹ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಂದಿನ ದಿನಗಳಲ್ಲಿ ನಿಮಗೆ ಗೊತ್ತಾಗಲಿದೆ ಎಂದರು.

ಶರತ್‍ಬಚ್ಚೇಗೌಡ ಅ. 25ರಂದು ಕಾಂಗ್ರೆಸ್ ಸೇರ್ಪಡೆಯಾಗುವ ಕಾರ್ಯಕ್ರಮಕ್ಕೆ ತಯಾರಿ ನಡೆದಿತ್ತು. ಹೊಸಕೋಟೆಯಲ್ಲಿ ಬೃಹತ್ ಸಮಾವೇಶ ನಡೆಸಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ, ಉಪ ಚುನಾವಣೆ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶಕ್ಕೆ ಅಡ್ಡಿಯಾಗಿದೆ. ನಾಯಕರೆಲ್ಲ ಚುನಾವಣೆಯಲ್ಲಿ ಬ್ಯುಸಿಯಾಗಿರುವುದರಿಂದ ಸೇರ್ಪಡೆ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ. ಉಪ ಚುನಾವಣೆ ಬಳಿಕ ಶರತ್‍ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಬೆಂಬಲಿಗರ ಮೂಲಕ ಮಾಹಿತಿ ಬಂದಿದೆ. ಈಗಾಗಲೇ ಶರತ್‍ಬಚ್ಚೇಗೌಡ ಅವರ ಬೆಂಬಲಿಗರು ಕಾಂಗ್ರೆಸ್‍ನ ಫೋಟೋಗಳನ್ನು ಶೇರ್ ಮಾಡುವ ಮೂಲಕ ಭಾರೀ ಪ್ರಚಾರ ನಡೆಸುತ್ತಿದ್ದಾರೆ. ಶರತ್‍ಬಚ್ಚೇಗೌಡ ಅವರ ಫೋಟೋಗಳು ಫೇಸ್​ಬುಕ್​ನಲ್ಲಿ ಕಾಂಗ್ರೆಸ್ ಬ್ಯಾನರ್​ಗಳಲ್ಲಿ ಈಗಾಗಲೇ ರಾರಾಜಿಸುತ್ತಿವೆ.

ABOUT THE AUTHOR

...view details