ಕರ್ನಾಟಕ

karnataka

ETV Bharat / state

ಹೊಸಕೋಟೆ ಉಪ ಚುನಾವಣಾ ಕಣ: ಎಂಟಿಬಿಗೆ ಶಾಕ್​ ಕೊಟ್ಟ ಶರತ್​​​​ ಬಚ್ಚೇಗೌಡ! - hosakote by election

ಯಾವುದೇ ಕಾರಣಕ್ಕೂ ಹೊಸಕೋಟೆ ಉಪ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳುವ ಮೂಲಕ ಅನರ್ಹ ಶಾಸಕ ಎಂಟಿಬಿ ನಾಗರಾಜ್​ಗೆ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಶಾಕ್​ ಕೊಟ್ಟಿದ್ದಾರೆ.

ಹೊಸಕೋಟೆ ಉಪಚುನಾವಣೆ ಕಣದಿಂದ ಹಿಂದೆ ಸರಿಯಲ್ಲ: ಎಂಟಿಬಿಗೆ ಶಾಕ್ ನೀಡಿದ ಶರತ್ ಬಚ್ಚೇಗೌಡ

By

Published : Oct 31, 2019, 7:32 PM IST

ಹೊಸಕೋಟೆ:ಯಾವುದೇ ಕಾರಣಕ್ಕೂ ಹೊಸಕೋಟೆ ಉಪ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳುವ ಮೂಲಕ ಅನರ್ಹ ಶಾಸಕ ಎಂಟಿಬಿ ನಾಗರಾಜ್​ಗೆ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಶಾಕ್​ ಕೊಟ್ಟಿದ್ದಾರೆ.

ಎಂಟಿಬಿಗೆ ಶಾಕ್ ನೀಡಿದ ಶರತ್ ಬಚ್ಚೇಗೌಡ
ಹೊಸಕೋಟೆ ಇತಿಹಾಸದಲ್ಲಿ ಈವರೆಗೆ ಉಪ ಚುನಾವಣೆ ನಡೆದಿಲ್ಲ, ಈಗ ನಡೆಯುತ್ತಿದೆ. ತನಗೆ ಮೋಸ ಅಗಿದೆ ಎಂದು ಯಾರು ಯಾರೋ ಎಲ್ಲೆಲ್ಲೋ ಹೋಗಿ ಕಣ್ಣೀರು ಹಾಕುತ್ತಿದ್ದಾರೆ. ಆದರೆ ನಾನು ಮಾತ್ರ ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಶರತ್ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿಯಾದಾಗಲೂ ನನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಹೊಸಕೋಟೆ ತಾಲೂಕಿನ ಸ್ವಾಭಿಮಾನಕ್ಕಾಗಿ ಮತ್ತು ಇಲ್ಲಿನ ಜನರ ಆಶ್ವಾಸನೆ ಪೂರೈಸಲು ನಾನು ಚುನಾವಣೆಗೆ ಸ್ಪರ್ಧಿಸಲೇಬೇಕಾಗಿದೆ. ನನ್ನ ಈ ನಿಲುವು ಬಿಜೆಪಿ ಮುಖಂಡರ ವಿರುದ್ಧ ಅಲ್ಲ ಎಂದು ಶರತ್ ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details