ಹೊಸಕೋಟೆ:ಬಚ್ಚೇಗೌಡ ಮಾತುಕೊಟ್ಟು ಉಲ್ಟಾ ಹೊಡೆದಿದ್ದಾರೆ ಅನ್ನೋದನ್ನ ಧರ್ಮಸ್ಥಳ ಮಂಜುನಾಥನ ಮೇಲೆ ಪ್ರಮಾಣ ಮಾಡಿ ಹೇಳುವಂತೆ ಅನರ್ಹ ಶಾಸಕ ಎಂ.ಟಿ.ಬಿ ನಾಗರಾಜ್ಗೆ ಶರತ್ ಬಚ್ಚೇಗೌಡ ಸವಾಲು ಹಾಕಿದ್ದಾರೆ.
ಬಚ್ಚೇಗೌಡ್ರು ಮಾತು ತಪ್ಪಿದ್ದಾರೆ ಅಂತ ಮಂಜುನಾಥನ ಮೇಲೆ ಎಂಟಿಬಿ ಆಣೆ ಮಾಡ್ಲಿ: ಶರತ್ ಬಚ್ಚೇಗೌಡ ಸವಾಲು
ಬಚ್ಚೇಗೌಡ ಮಾತುಕೊಟ್ಟು ಉಲ್ಟಾ ಹೊಡೆದಿದ್ದಾರೆ ಅನ್ನೋದನ್ನ ಧರ್ಮಸ್ಥಳ ಮಂಜುನಾಥನ ಮೇಲೆ ಪ್ರಮಾಣ ಮಾಡಿ ಹೇಳುವಂತೆ ಅನರ್ಹ ಶಾಸಕ ಎಂ.ಟಿ.ಬಿ ನಾಗರಾಜ್ಗೆ ಶರತ್ ಬಚ್ಚೇಗೌಡ ಸವಾಲು ಹಾಕಿದ್ದಾರೆ.
ಆಣೆ ಮಾಡುವಂತೆ ಎಂಟಿಬಿಗೆ ಶರತ್ ಬಚ್ಚೇಗೌಡ ಸವಾಲು!
ಅಧಿಕಾರಕ್ಕಾಗಿ ನಾವು ರಾಜಕೀಯ ಮಾಡ್ತಿಲ್ಲ,ಕಾಂಗ್ರೆಸ್ ಜೊತೆ ಯಾವುದೇ ಒಳ ಒಪ್ಪಂದವಾಗಿಲ್ಲ. ನನಗೆ ಯಾವ ಬೋರ್ಡ್ ಛೇರ್ಮನ್ ಬೇಡ, ತಾಲೂಕಿನ ಸೇವೆ ಮಾಡಲು ಬಂದಿದ್ದೇನೆ. ಎಂಟಿಬಿ ಹತಾಶರಾಗಿ ದಿನಕ್ಕೊಂದು ಸುಳ್ಳು ಹೇಳಿದ್ರೆ ಜನ ನಂಬ್ತಾರೆ ಅಂದುಕೊಂಡಿದ್ದಾರೆ ಅದು ತಪ್ಪು ಎಂದು ಶರತ್ ಬಚ್ಚೇಗೌಡ ಎಂಟಿಬಿ ನಾಗರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಬಚ್ಚೇಗೌಡ ಮತ್ತು ಶರತ್ ಬಚ್ಚೇಗೌಡ ವಿರುದ್ಧ ಮಾತಿಗೆ ತಪ್ಪುತ್ತಿದ್ದಾರೆ. ನನ್ನನ್ನು ಸೋಲಿಸಲು ಕುತಂತ್ರ ನಡೆಸಿದ್ದಾರೆಂದು ವಾಗ್ದಾಳಿ ನಡೆಸಿದ್ದರು.