ಕರ್ನಾಟಕ

karnataka

ETV Bharat / state

'ಡೇಟಿಂಗ್‌ಗೆ ಬಾ..' ಹಿಮಾಲಯ ಡ್ರಗ್ಸ್‌ ಕಂಪನಿ ಮುಖ್ಯಸ್ಥರ ವಿರುದ್ಧ ಲೈಂಗಿಕ ಕಿರುಕುಳ ಆರೋಪ - sexual harrassment

ಬೆಂಗಳೂರು ನಗರದ ಉತ್ತರ ತಾಲೂಕಿನ ಮಾಕಳಿಯಲ್ಲಿರುವ ಹಿಮಾಲಯ ಡ್ರಗ್​ ಕಂಪನಿಯ ಮುಖ್ಯಸ್ಥ ಸುಂದರ್​ರಾಮ್​ ರಾಮಚಂದ್ರನ್​ ಸಹೋದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಮಾಲಯ ಡ್ರಗ್​ ಕಂಪನಿಯ ಮುಖ್ಯಸ್ಥ ಸುಂದರ್​ರಾಮ್​ ರಾಮಚಂದ್ರನ್

By

Published : Sep 13, 2019, 7:29 PM IST

ಬೆಂಗಳೂರು:ನಗರದ ಉತ್ತರ ತಾಲೂಕಿನ ಮಾಕಳಿಯಲ್ಲಿರುವ ಹಿಮಾಲಯ ಡ್ರಗ್​ ಕಂಪನಿಯ ಮುಖ್ಯಸ್ಥ ಸುಂದರ್​ರಾಮ್​ ರಾಮಚಂದ್ರನ್,​ ಸಹೋದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲು

ಮನೆಗೆ ಡ್ರಾಪ್ ಮಾಡುವ ನೆಪದಲ್ಲಿ ಸಂತ್ರಸ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಪ್ರತಿನಿತ್ಯ ಡೇಟಿಂಗ್‌ಗೆ ಬಾ.. ಗಂಡನನ್ನು ಬಿಟ್ಟು ಬಾ ಎಂದು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಈ ಕುರಿತು ಪೊಲೀಸರಿಗೆ ದೂರು ನೀಡಿದರೆ, ನೀನೇ ಕೋರ್ಟ್ ಕಚೇರಿ ಅಲೆದಾಡಬೇಕಾದೀತು ಎಂದು ಆರೋಪಿ ಬೆದರಿಕೆ ಹಾಕಿದ್ದರಂತೆ. ಇದರಿಂದ ಬೇಸತ್ತ ಮಹಿಳೆ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದರಂತೆ. ಆದರೆ ಆರೋಪಿ ವಿರುದ್ಧ ಕಂಪನಿ ಮಾತ್ರ ಯಾವುದೇ ಕ್ರಮ ಕೈಗೊಳ್ಳದ ಕಾರಣ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಪೊಲೀಸರ ಪ್ರಕರಣ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details