ಕರ್ನಾಟಕ

karnataka

ETV Bharat / state

ರಾಜಕೀಯ ವೈಷಮ್ಯ; ರಾಗಿ ಬಣವೆಗೇ ಬೆಂಕಿ ಇಟ್ಟ ಕಿಡಿಗೇಡಿಗಳು!! - 3 ಲಕ್ಷ ಮೌಲ್ಯದ ರಾಗಿ ಬಣವೆ ಕಿಡಿಗೇಡಿಗಳು ಬೆಂಕಿ

ಗ್ರಾಮ ಪಂಚಾಯತ್​ ಚುನಾವಣೆ ಇದೀಗ ರಾಜಕೀಯ ವೈಷಮ್ಯಕ್ಕೂ ಕಾರಣವಾಗಿದೆ. ಕಟಾವು ಮಾಡಿ ಕಣ ಮಾಡಲು ಬಣವೆ ಹಾಕಲಾಗಿದ್ದ ರಾಗಿಗೆ ರಾತ್ರೋರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೆಳೆಗಾರ ತಮ್ಮ ಅಳಲು ತೋಡಿಕೊಂಡಿದ್ದಾರೆ.

Doddaballapur
ರಾಗಿ ಬಣವೆಗೇ ಬೆಂಕಿ

By

Published : Dec 24, 2020, 6:03 PM IST

ದೊಡ್ಡಬಳ್ಳಾಪುರ(ಬೆಂ.ಗ್ರಾಮಾಂತರ): ಗ್ರಾಮ ಪಂಚಾಯತ್ ಚುನಾವಣೆ ಕಾವು ಗ್ರಾಮಗಳಲ್ಲಿ ಜೋರಾಗಿದೆ. ಇದೇ ಚುನಾವಣೆ ರಾಜಕೀಯ ವೈಷಮ್ಯಕ್ಕೂ ಕಾರಣವಾಗಿದೆ. ದ್ವೇಷಕ್ಕೆ 3 ಲಕ್ಷ ಮೌಲ್ಯದ ರಾಗಿ ಬಣವೆ ಕಿಡಿಗೇಡಿಗಳ ಕೃತ್ಯದಿಂದ ಸುಟ್ಟು ಬೂದಿಯಾಗಿದೆ.

ರಾಗಿ ಬಣವೆಗೇ ಬೆಂಕಿ ಇಟ್ಟ ಕಿಡಿಗೇಡಿಗಳು

ದೊಡ್ಡಬಳ್ಳಾಪುರ ತಾಲೂಕಿನ ತಿಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಲಗೆರೆ ಗ್ರಾಮ3ದಲ್ಲಿ ಈ ಘಟನೆ ನಡೆದಿದೆ. ಶ್ಯಾಮರಾಜು ಸಿ ಹಾಗೂ ಗೋಪಾಲಕೃಷ್ಣಪ್ಪ ಎಂಬುವವರ ರಾಗಿ ಬಣವೆ ಬೆಂಕಿಗೆ ಆಹುತಿಯಾಗಿದ್ದು, ಸುಮಾರು ಏಳು ಎಕರೆಯಲ್ಲಿ ಬೆಳೆದಿದ್ದ ರಾಗಿಯನ್ನು ಕಟಾವು ಮಾಡಿ ಕಣ ಮಾಡಲು ಬಣವೆ ಹಾಕಲಾಗಿತ್ತು. ಇನ್ನೇನು ಕಣ ಮಾಡಿ ಮನೆಗೆ ಫಸಲು ತುಂಬಿಕೊಳ್ಳುವ ಸಮಯದಲ್ಲಿ ಕಿಡಿಗೇಡಿಗಳು ರಾಗಿ ಬಣವೆಗೆ ಬೆಂಕಿ ಇಟ್ಟಿದ್ದಾರೆ.

ಇದನ್ನೂ ಓದಿ:ಸಾವಿರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬಿಆರ್​ಟಿಎಸ್ ಯೋಜನೆ ಅವ್ಯವಸ್ಥೆ!

ತಡ ರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ರಾತ್ರಿಯಿಂದ ಅಗ್ನಿ ಶಾಮಕ ದಳ ಬೆಂಕಿ ನಿಂದಿಸಲು ಶುರು ಮಾಡಿ ಬೆಳಗ್ಗೆ ಎಂಟು ಗಂಟೆಗೆ ಸಂಪೂರ್ಣವಾಗಿ ಬೆಂಕಿ ನಿಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯ ಮುಖಂಡರ ಬೆಂಬಲಿಗರಾಗಿರುವ ಶ್ಯಾಮರಾಜ್​, ರಾಜಕೀಯ ವೈಷಮ್ಯದಿಂದ ರಾತ್ರಿ ಸಮಯದಲ್ಲಿ ರಾಗಿ ಬಣವೆಗೆ ಬೆಂಕಿ ಇಟ್ಟಿದ್ದಾರೆ.

ರಾಗಿ ಹುಲ್ಲು ಎಲ್ಲವೂ ಬೆಂಕಿಗೆ ಆಹುತಿಯಾಗಿದ್ದು, ಇದರಿಂದ ಮನೆಯಲ್ಲಿರುವ 7 ಹಸುಗಳಿವೆ ಮೇವಿಲ್ಲದಂತಾಗಿದೆ. ಈಗ ಹುಲ್ಲು ಹೊರಗಿನಿಂದ ಕೊಂಡುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ನಾವು ರಾಗಿ ಬೆಳೆದು ಜೀವನ ಮಾಡುತ್ತಿದ್ದೆವು. ಈಗ ತಿನ್ನಲೂ ಸಹ ರಾಗಿ ಕೊಂಡುಕೊಳ್ಳಬೇಕಿದೆ ಎಂದು ಶ್ಯಾಮರಾಜು ತಮ್ಮ ಅಳಲು ಹೇಳಿಕೊಂಡರು. ಇನ್ನು ಘಟನೆ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details