ದೇವನಹಳ್ಳಿ: ಹಿರಿಯ ಸಾಹಿತಿ, ಪತ್ರಕರ್ತ ಪಾಟೀಲ್ ಪುಟ್ಟಪ್ಪ ನಿಧನರಾದ ಹಿನ್ನೆಲೆ ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳಿದರು.
ವಿಮಾನದಲ್ಲಿ ತಾಂತ್ರಿಕ ದೋಷ... ಪಾಪು ಅಂತ್ಯಕ್ರಿಯೆಗೆ ಕಾರಿನಲ್ಲೇ ತೆರಳಿದ ಸಚಿವರು - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಪರಿಣಾಮ ಸಚಿವರು ಕಾರಿನಲ್ಲೇ ಪಾಟೀಲ ಪುಟ್ಟಪ್ಪ ಅವರ ಅಂತ್ಯಕ್ರಿಯೆಗೆ ತೆರಳಿದರು.
ಪಾಪು ಅಂತ್ಯಕ್ರಿಯೆಗೆ ಕಾರಿನಲ್ಲೇ ತೆರಳಿದ ಸಚಿವರು
ಆದರೆ, ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ವಿಮಾನದ ಬದಲಿಗೆ ಕಾರಿನ ಮೂಲಕವೇ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು.
ಸಚಿವರು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಂಡಿಗೋ ವಿಮಾನದಲ್ಲಿ ಹುಬ್ಬಳ್ಳಿ ಹೋಗಬೇಕಿತ್ತು. ರನ್ ವೇಯಲ್ಲಿ ಇರುವಾಗ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಇಂಡಿಗೋ ಸಂಸ್ಥೆ ಹುಬ್ಬಳ್ಳಿ ಪ್ರಯಾಣ ರದ್ದುಗೊಳಿಸಿದೆ. ಆಗ ಕಾರಿನಲ್ಲೇ ವಿಮಾನ ನಿಲ್ದಾಣದಿಂದ ಪಾಪು ಅಂತ್ಯಕ್ರಿಯೆಗೆ ತೆರಳಿದರು.