ಕರ್ನಾಟಕ

karnataka

ETV Bharat / state

ಮಣ್ಣಲ್ಲಿ ಮಣ್ಣಾದ ಹಿರಿಯ ನಟ ಕಲಾತಪಸ್ವಿ ರಾಜೇಶ್... - ಹಿರಿಯ ನಟ ರಾಜೇಶ್ ಅಂತ್ಯಕ್ರಿಯೆ

ಅಭಿಮಾನಿಯ ಮನವಿಯಂತೆ ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಹಿರಿಯ ನಟ ಕಲಾತಪಸ್ವಿ ರಾಜೇಶ್​ ಅವರ ಅಂತ್ಯಸಂಸ್ಕಾರ ನೆರವೇರಿದೆ.

senior-actor-rajesh-funeral-in-govindapura
ಮಣ್ಣಲ್ಲಿ ಮಣ್ಣಾದ ಹಿರಿಯ ನಟ ಕಲಾತಪಸ್ವಿ ರಾಜೇಶ್

By

Published : Feb 19, 2022, 7:01 PM IST

Updated : Feb 19, 2022, 7:44 PM IST

ನೆಲಮಂಗಲ:ಅಭಿಮಾನಿಯ ಮನವಿಯಂತೆ ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಹಿರಿಯ ನಟ, ಕಲಾತಪಸ್ವಿ ರಾಜೇಶ್​ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅಳಿಯ ಅರ್ಜುನ್ ಸರ್ಜಾ ಸೇರಿದಂತೆ ಕುಟುಂಬಸ್ಥರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಯಿತು.

ಅಂತಿಮ ವಿಧಿವಿಧಾನ ಬಳಿಕ ಸಮಾಧಿಗೆ ನಮನ

ರಾಜೇಶ್ ಅವರ ಅಭಿಮಾನಿ ಸಿದ್ದಲಿಂಗಯ್ಯ ಎಂಬುವರು ಗೋವಿಂದಪುರ ಗ್ರಾಮದಲ್ಲಿ ಅಂತ್ಯಕ್ರಿಯೆಗಾಗಿ ತಮ್ಮ 10 ಗುಂಟೆ ಜಾಗವನ್ನು ನೀಡಿದ್ದಾರೆ. ಪೊಲೀಸ್​ ಸಿಬ್ಬಂದಿಯು ಸರ್ಕಾರಿ ಗೌರವ ಸಲ್ಲಿಸಿದರು. ಹಾಲುಮತ ಸಂಪ್ರದಾಯದಂತೆ ರಾಜೇಶ್ ಅಂತ್ಯಕ್ರಿಯೆ ಜರುಗಿತು.

ಮಣ್ಣಲ್ಲಿ ಮಣ್ಣಾದ ಹಿರಿಯ ನಟ ಕಲಾತಪಸ್ವಿ ರಾಜೇಶ್

ಇದನ್ನೂ ಓದಿ:ತಾತನ ಅಂತಿಮ ದರ್ಶನ ಪಡೆದ ನಟಿ ಐಶ್ವರ್ಯ ಅರ್ಜುನ್​

ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್ ಅವರು ಇಂದು ಮುಂಜಾನೆ 2.30ರ ಸುಮಾರಿಗೆ ಇಹಲೋಕವನ್ನು ತ್ಯಜಿಸಿದ್ದರು. ಬಳಿಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜೇಶ್​ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಹಲವರು ರಾಜೇಶ್ ಅವರ ಅಂತಿಮ ದರ್ಶನ ಪಡೆದಿದ್ದರು.

Last Updated : Feb 19, 2022, 7:44 PM IST

ABOUT THE AUTHOR

...view details