ಕರ್ನಾಟಕ

karnataka

By

Published : Nov 26, 2020, 7:41 AM IST

ETV Bharat / state

ಹೆಸರಘಟ್ಟದ ಐಐಹೆಚ್ಆರ್ ನಲ್ಲಿ ಆತ್ಮ ನಿರ್ಭರ್​ ತರಕಾರಿಗಳ ಕುರಿತು ವಿಚಾರ ಸಂಕಿರಣ

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆಯಲ್ಲಿ ಆತ್ಮ ನಿರ್ಭರ ತರಕಾರಿಗಳು ಕುರಿತು ವಿಚಾರ ಸಂಕಿರಣವನ್ನು ವೆಬಿನಾರ್ ಮೂಲಕ ನಡೆಸಲಾಯಿತು.

Self-care Vegetable Symposium at IIHR in Yalhanka
ಹೆಸರಘಟ್ಟದ ಐಐಹೆಚ್ಆರ್ ನಲ್ಲಿ ಆತ್ಮ ನಿರ್ಭರ ತರಕಾರಿಗಳು ವಿಚಾರ ಸಂಕಿರಣ

ಯಲಹಂಕ: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಹೆಚ್ ಆರ್) ಕೇಂದ್ರ ಸರ್ಕಾರದ ವಾರ್ತಾ ಪ್ರಸಾರ ಸಚಿವಾಲಯ ಮತ್ತು ಕ್ಷೇತ್ರ ಸಂಪರ್ಕ ಬ್ಯೂರೋ ಮೈಸೂರು ಸಹಯೋಗದಲ್ಲಿ ಆತ್ಮ ನಿರ್ಭರ್​- ಕೃಷಿಯಲ್ಲಿ ತರಕಾರಿಗಳು ಕುರಿತ ವಿಚಾರ ಸಂಕಿರಣವನ್ನು ವೆಬಿನಾರ್ ಮೂಲಕ ನಡೆಸಲಾಯಿತು.

ಓದಿ:ಜಾತಿಗೊಂದು ನಿಗಮ ಮಂಡಳಿ ರಚಿಸುವುದರ ಬದಲು ಪೋಷಕರ ಸಮಸ್ಯೆಗಳಿಗೆ ಪರಿಹಾರ ನೀಡಿ : ಎಂ ನಾರಾಯಣಸ್ವಾಮಿ

ವಿಚಾರ ಸಂಕಿರಣದ ಉದ್ಘಾಟನೆಯನ್ನ ಐಐಹೆಚ್ಆರ್ ನಿರ್ದೇಶಕರಾದ ಡಾ. ಎಂ.ಆರ್. ದಿನೇಶ್ ನೆರವೇರಿಸಿದರು. ನಂತರ ಮಾತನಾಡಿದ ಅವರು ತೋಟಗಾರಿಕಾ ವಲಯದಲ್ಲಿ ತರಕಾರಿ ಬೆಳೆಗಳು ಮಹತ್ವದ ಪಾತ್ರ ವಹಿಸಿವೆ. ದಿನ ನಿತ್ಯದ ಅಗತ್ಯ ಗಳಲ್ಲಿ ಪೋಷಕಾಂಶ ಭರಿತ ತರಕಾರಿ ಬಳಕೆ ಮತ್ತು ರೈತರು ವಿನೂತನ ತಂತ್ರಜ್ಞಾನಗಳನ್ನು ಬಳಸಲು ಮುಂದಾದಾಗ ಆರ್ಥಿಕ ಪ್ರಗತಿ ಸಾಧ್ಯ. ಇದರ ಅನುಷ್ಠಾನಕ್ಕೆ ಐಐಹೆಚ್ ಆರ್ ಸಹ ಮುಂದಾಗುತ್ತದೆ ಎಂದರು.

ವಿಚಾರ ಸಂಕಿರಣದಲ್ಲಿ ತರಕಾರಿ ಬೆಳೆಗಳ ಮುಖ್ಯಸ್ಥೆ ಡಾ. ಕೆ. ಮಾಧವಿ ರೆಡ್ಡಿ. ಡಾ. ಬಿ. ನಾರಾಯಣ ಸ್ವಾಮಿ ತಮ್ಮ ವಿಚಾರ ಮಂಡಿಸಿದರು. ದೇಶಾದ್ಯಂತ ವೆಬಿನಾರ್ ನಲ್ಲಿ ರೈತರು, ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಐಐಹೆಚ್ ಆರ್ ಸಿಬ್ಬಂದಿ ಭಾಗವಹಿಸಿದರು.

For All Latest Updates

TAGGED:

ABOUT THE AUTHOR

...view details